ರೀಲ್ಸ್ ಹುಚ್ಚು ಇನ್ನೂ ಏನೇನ್ ನೋಡ್ಬೇಕೊ ಈ ಕಣ್ಣಲ್ಲಿ…

K 2 Kannada News
ರೀಲ್ಸ್ ಹುಚ್ಚು ಇನ್ನೂ ಏನೇನ್ ನೋಡ್ಬೇಕೊ ಈ ಕಣ್ಣಲ್ಲಿ…
WhatsApp Group Join Now
Telegram Group Join Now

K2kannadanews.in

Reel’s crazy ವೈರಲ್ ವೀಡಿಯೋ : ರೀಲ್ ಕೊಚ್ಚು ದಿನೇ ದಿನೇ ಮಿತಿಮೀರುತ್ತಾ ಸಾಗಿದೆ. ತಾಯಿಯೊಬ್ಬಳು ರೀಲ್ಸ್ ಮಾಡುವ ಭರದಲ್ಲಿ ತನ್ನ ಮಗುವಿನ ಜೀವಕ್ಕೆ ಅಪಾಯ ತರುವ ರೀತಿ ಸಾಹಸ ಮಾಡುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಇನ್ನು ಈ ಕಣ್ಣಲ್ಲಿ ಏನೇನು ಮಾಡಬೇಕು ಅಂತ ಕಮೆಂಟ್ ಮಾಡ್ತಿದ್ದಾರೆ..

ಹೌದು ಈ ವಿಡಿಯೋ Xನ, Raw and real man ಖಾತೆಯಿಂದ ಅಪ್ ಪೋಡ್ ಮಾಡಲಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡುಗರು ಶಾಕ್‌ಗೆ ಒಳಗಾಗಿದ್ದಾರೆ. ಏಕೆಂದರೆ ತಾಯಿಯೊಬ್ಬಳು ಮಗುವನ್ನು ಅಪಾಯದಿಂದ ಪಾರು ಮಾಡುತ್ತಾಳೆ ಕೇಳಿರುವ ನಾವು ಈ ವಿಡಿಯೋ ನೋಡಿದಾಗ ಏನ್ ಹೇಳಬೇಕೊ ಅರ್ಥ ಆಗಲ್ಲ..

ವೀಡಿಯೋದಲ್ಲಿ ಕಾಣುವಂತೆ ಬಾವಿಯ ತುದಿಯಲ್ಲಿ ಕುಳಿತ ಆಕೆ ಮಗುವಿನೊಂದಿಗೆ ರೀಲ್ಸ್ ಮಾಡುತ್ತಿದ್ದಾಳೆ, ಅಪಾಯ ಬರಿ ಮಗು ಮಾತ್ರವಲ್ಲ ಆಕೆಗೂ ಇದೆ, ನಿಯಂತ್ರಣ ತಪ್ಪಿ ಆಕೆ ಮಗುವಿನೊಂದಿಗೆ ಬಾವಿಯೊಳಗೆ ಬಿದ್ದರೆ ಖಂಡಿತ ಬದುಕುಳಿಯುವುದು ದೂರದ ಮಾತಾಗಿದೆ. ಆದ್ರೆ ಆಕೆ ಇದೆಲ್ಲವನ್ನು ಮರೆತು, ಕೇವಲ ರೀಲ್ಸ್‌ಗಾಗಿ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು ಎಷ್ಟರ ಮಟ್ಟಿವೆ ಸೆಇ ಹೇಳಿ. ಇದೊಂದು ದೊಡ್ಡ ಅಪಾಯಕ್ಕೆ ದಾರಿಯಾಗುವ ಸಂಭವಿದೆ ಎಂಬ ಕುರಿತು ಆಲೋಚನೆ ಮಾಡದೆ ಮಗುವಿನ ಜೀವಕ್ಕೂ ಆಪತ್ತು ತರಲು ಮುಂದಾಗಿದ್ದಾರೆ. ಇಂಥದ್ದು ಸಾಹಸಕ್ಕೆ ಯಾರು ಕೈ ಹಾಕಬೇಡಿ ಅನ್ನೋದೇ ನಮ್ಮ k2 ನ್ಯೂಸ್ ನ ಕಳಕಳಿ..

WhatsApp Group Join Now
Telegram Group Join Now
Share This Article