
ರಾಯಚೂರು : ಚುನಾವಣೆ ಮತ್ತು ಬೇಸಿಗೆ ಹಿನ್ನೆಲೆ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಎರಡು ತಿಂಗಳಲ್ಲಿ ಸುಮಾರು 3.29 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಿ ದಾಖಲೆ ನಿರ್ಮಾಣ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬಿಯರ್ ಮಾರಾಟ ಹೆಚ್ಚಾಗುತ್ತಲೇ ಇದೆ. ಆದರೆ ಈ ಬಾರಿ ಚುನಾವಣೆಯು ಬಂದ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳ ಕಂಡಿದೆ. ಇನ್ನೂ ಅನೇಕ ಮದ್ಯಪ್ರಿಯರು ಬೇಸಿಗೆಯಲ್ಲಿ ಕೂಲ್ ಆಗಿರಲು ಬಿಯರ್ ಕುಡಿಯಲು ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ತಪ್ಪು ಕಲ್ಪನೆಯಿಂದ ಬೇಸಿಗೆಯಲ್ಲಿ ಬಿಯರ್ ಅನ್ನು ಜನರು ಹೆಚ್ಚಾಗಿ ಕುಡಿಯುತ್ತಿದ್ದಾರೆ.
ಕಳೆದ ವರ್ಷ 6,12,709 ಬಾಕ್ಸ್ ಮಾರಾಟ ಆಗಿದ್ದರೆ, ಈ ಬಾರಿ 8,71,714 ಬಾಕ್ಸ್ ಬಿಯರ್‌ಗಳು ಮಾರಾಟ ಆಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 2,59,005 ಬಿಯರ್ ಬಾಕ್ಸ್‌ಗಳ ಮಾರಾಟ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ರಾಯಚೂರು – 3,29,773, ಮಾನ್ವಿ 2,55,483, ಸಿಂಧನೂರು 1,38,915, ಲಿಂಗಸೂಗೂರು 1,47,534 ಬಿಯರ್ ಬಾಕ್ಸ್‌ಗಳ ಮಾರಾಟವಾಗಿರುವ ಬಗ್ಗೆ ಮಾಹಿತಿ ದೊರೆತಿದೆ.
![]() |
![]() |
![]() |
![]() |
![]() |
[ays_poll id=3]