This is the title of the web page
This is the title of the web page
Crime NewsNational NewsVideo News

ಪೊಲೀಸ್ ಕಸ್ಟಡಿಯಲ್ಲಿದ್ದ 19ಕೆಜಿ ಗಾಂಜಾ ಇಲಿಗಳು ತಿಂದಿವೆಯಂತೆ : ನ್ಯಾಯಾಧೀಶರು ಕಕ್ಕಾಬಿಕ್ಕಿ..!


K2kannadanews.in

Rat eats cannabis : ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದವರಿಂದ ವಶಪಡಿಸಿಕೊಂಡಿದ್ದ ಗಾಂಜಾ ಗೋದಾಮಿನಲ್ಲಿ ಇರಿಸಲಾಗಿತ್ತು. 10ಕೆಜಿ ಗಾಂಜಾ ಮತ್ತು ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದು ಜಾರ್ಖಂಡ್ ಧನ್ ಬಾದ್ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ವರದಿ ನೋಡಿ ನ್ಯಾಯಾಧೀಶರು ಕಕ್ಕಾಬಿಕ್ಕಿಯಾಗಿದ್ದಾರೆ.

ಗಾಂಜಾ ಮತ್ತು ಭಾಂಗ್ ಹೊಂದಿದ್ದಕ್ಕಾಗಿ ಶಂಭು ಅಗರ್ ವಾಲ್ ಮತ್ತು ಅವರ ಮಗನನ್ನು 2018ರ ಡಿ.14 ರಂದು ಬಂಧಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರಾಮ್ ಶರ್ಮಾ ಅವರ ನ್ಯಾಯಾಲಯವು ತನಿಖಾಧಿಕಾರಿ ಜೈಪ್ರಕಾಶ್ ಪ್ರಸಾದ್ ಅವರಿಗೆ ಮುಟ್ಟುಗೋಲು ಹಾಕಿಕೊಂಡ ವಸ್ತುಗಳನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡಿತ್ತು. ಆದರೆ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಶಪಡಿಸಿಕೊಂಡ ವಸ್ತುಗಳನ್ನು ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಈ ವಸ್ತುವನ್ನು ಇಲಿಗಳು ತಿಂದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳನ್ನು ಇಲಿಗಳು ನಾಶಪಡಿಸಿವೆ ಎಂದು ತನಿಖಾಧಿಕಾರಿ ಏಪ್ರಿಲ್ 6 ರಂದು ವರದಿ ಸಲ್ಲಿಸಿದ್ದಾರೆ.

ಇತ್ತ ಆರೋಪಿ ಶಂಭು ಮತ್ತು ಅವರ ಮಗನ ಪರ ವಕೀಲರು ಹೇಳಿಕೆ ನೀಡಿದ್ದು, ತಮ್ಮ ಕಕ್ಷಿದಾರರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ವಕೀಲ ಅಭಯ್ ಭಟ್ ಅವರು ಕಾನೂನಿನ ಆಧಾರದ ಮೇಲೆ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ ಮತ್ತು ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸರು ಏಕೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಧನ್ಬಾದ್ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.


[ays_poll id=3]