
ರಾಯಚೂರು : ರೈತರ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಲು ಒತ್ತಾಯಿಸಿ ಡಿಸೆಂಬರ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತ ಘರ್ಜನೆ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘ ಜಿಲ್ಲಾಧ್ಯಕ್ಷ ಕೆ.ರಂಗನಾಥ ಪಾಟೀಲ್ ಹೇಳಿದರು.
ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ನಿಗದಿ ಕಾಯ್ದೆ ಜಾರಿಗೊಳಿಸಬೇಕು. ರೈತರು ಕೃಷಿಗೆ ಬಳಸುವ ಯಂತ್ರೋಪಕರಣಗಳು, ನೀರಾವರಿ ಪಂಪ್ಲೆಟ್ಟುಗಳು, ಕೃಷಿ ಪರಿಕರಗಳು ಹಾಗೂ ಇತರೆ ಕೃಷಿ ಬಳಕೆ ವಸ್ತುಗಳ ಮೇಲೆ ಜಿ.ಎಸ್. ಟಿಯನ್ನು ರದ್ದುಗೊಳಿಸಬೇಕು. ರಸ ಗೊಬ್ಬರಗಳ ಕಂಪನಿಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಬೇಕು.
ರಸಗೊಬ್ಬರವನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೀಡುವ ಹಣವನ್ನು ಹೆಚ್ಚಿಗೆ ಮಾಡಿ ಪ್ರತಿ ಎಕರೆ ವಾರು ಧನಸಹಾಯ ಮಾಡಬೇಕು. ಫಸಲ್ ಭೀಮಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ, ಎಲ್ಲಾ ಬೆಳೆಗೆ ಯೋಜನೆ ವಿಸ್ತಾರ ಮಾಡಬೇಕು ಮತ್ತು ವೈಯಕ್ತಿಕವಾಗಿ ಪ್ರತಿ ರೈತರ ಬೆಳೆ ನಷ್ಟ ಪರಿಹಾರವನ್ನು ತುಂಬಿಕೊಡಲು ಒತ್ತಾಯಿಸಲಾಗುತ್ತದೆ ಎಂದರು.
![]() |
![]() |
![]() |
![]() |
![]() |
[ays_poll id=3]