K2kannadanews.in
Tax collection ರಾಯಚೂರು : ಗ್ರಾಮ ಪಂಚಾಯತಿ (gram panchayat) ವ್ಯಾಪ್ತಿಯಲ್ಲಿ ತೆರಿಗೆ (Tax) ವಸೂಲಾತಿ ಅಭಿಯಾನ ಆರಂಭಿಸಲಾಗಿದೆ. 1.79 ಕೋಟಿ ರೂ. ದಾಖಲೆಯ ತೆರಿಗೆ ಒಂದೇ ದಿನ ವಸೂಲಿಯಾಗಿದೆ.
ರಾಯಚೂರು (Raichur) ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ತೆರಿಗೆ ವಸೂಲಾತಿ (Collection) ಅಭಿಯಾನ ಆರಂಬಿಸಿದ್ದು. ಶುಕ್ರವಾರ (Friday) ಒಂದೇ ದಿನ ಜಿಲ್ಲೆಯಲ್ಲಿ 1.79 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ರಾಯಚೂರು ತಾಲೂಕಿನಲ್ಲಿ 64,11,987 ರೂ., ಸಿಂಧನೂರು (Sindhnur) ತಾಲ್ಲೂಕಿನಲ್ಲಿ 41,48,443 ರೂ., ಮಸ್ಕಿ (Mski) ತಾಲ್ಲೂಕಿನಲ್ಲಿ 18,03,540 ರೂ., ಮಾನ್ವಿ (Manvi) ತಾಲ್ಲೂಕಿನಲ್ಲಿ 16,21,941 ರೂ., ದೇವದುರ್ಗ (Devadurg) ತಾಲ್ಲೂಕಿನಲ್ಲಿ 7,48,720 ರೂ., ಲಿಂಗಸೂಗೂರು (Lingasuguru) ತಾಲ್ಲೂಕಿನಲ್ಲಿ 12,05,943 ರೂ., ಸಿರವಾರ (Sirawar) ತಾಲ್ಲೂಕಿನಲ್ಲಿ 11,55,254 ರೂ. ಹಾಗೂ ಅರಕೇರಾದಲ್ಲಿ 8,07,994 ರೂ. ಸೇರಿದಂತೆ ಒಟ್ಟು ಮೊತ್ತ ರೂ.1.79 ಕೋಟಿ ರೂ. ವಸೂಲಿ ಮಾಡಲಾಗಿದೆ. ತೆರಿಗೆ ವಸೂಲಾತಿ ಅಭಿಯಾನದಿಂದ ನಿಗದಿತ ಗುರಿಗಿಂತ ಹೆಚ್ಚು ತೆರಿಗೆ ವಸೂಲಿ ಮಾಡಲಾಗಿದೆ.