K2kannadanews.in
Theft in Reliance ರಾಯಚೂರು : ನಗರದ ಮಂತ್ರಾಲಯ (Mantralaya road) ರಸ್ತೆಯಲ್ಲಿರುವ ರಿಲಯನ್ಸ್ ಟ್ರೆಂಡ್ (Reliance Trend) ಅಂಗಡಿ ಒಳನುಗ್ಗಿದ ಕಳ್ಳರು ನಗದು ಹಣ ಕಳ್ಳತನ (theft) ಮಾಡಿರುವ ಘಟನೆ ನಡೆದಿದೆ.
ರಾಯಚೂರು (Raichur) ನಗರದ ಮಂತ್ರಾಲಯ ರಸ್ತೆಯ ಆಕಾಶವಾಣಿ ಕೇಂದ್ರದ (akashavani center) ಪಕ್ಕದಲ್ಲೇ ಇರುವ ರಿಲಯನ್ಸ್ ಟ್ರೆಂಡ್ ನಲ್ಲಿ ಘಟನೆ ಜರುಗಿದೆ. ಜೂನ್ 1ರಂದು (June) ಕಳ್ಳತನ ಘಟನೆ ಬೆಳಕಿಗೆ ಬಂದಿದ್ದು ರಿಲಯನ್ಸ್ ನಲ್ಲಿ ಒಳಹೊಕ್ಕ ಕಳ್ಳರು 75,000 ಗಳು ಮಾಡಿದ್ದಾರೆ ಎಂಬ ಮಾಹಿತಿ (Infarmation) ದೊರೆತಿದ್ದು, ಘಟನೆಗೆ ಸಂಬಂಧಪಟ್ಟಂತೆ ನೇತಾಜಿ ಪೊಲೀಸ್ (Nethaji police station) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನ ಹಿಡಿಯಲು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ (Social media) ಸಿಸಿ ಕ್ಯಾಮೆರಾ ವಿಡಿಯೋ (CCTV video) ಒಂದು ವೈರಲ್ (Viral) ಆಗಿದ್ದು, ಕಳ್ಳರು ಒಳಗೆ ಬಂದು ಹುಡುಕಾಟ ನಡೆಸುವ ವಿಡಿಯೋ ವೈರಲ್ ಆಗಿದೆ. ಆದರೆ ಈ ಒಂದು ವಿಡಿಯೋ ಹಳೆಯದ್ದು (Old video) ಎಂದು ಹೇಳಲಾಗುತ್ತಿದೆ.