![]() |
![]() |
![]() |
![]() |
![]() |
ಸಿಂಧನೂರು : ಸಿಂಧನೂರು ರಂಗಮಂದಿರದಲ್ಲಿ ಪುನೀತ್ ರಾಜಕುಮಾರ್ ಪುತ್ತಳಿ ಸ್ಥಾಪನೆ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಪುನೀತ್ ರಾಜಕುಮಾರ್ ಪುತ್ತಳಿ ಮೆರವಣಿಗೆ ವೇಳೆ, ಪೊಲೀಸ್ ಅಧಿಕಾರಿ ಮೇಲೆ ದಾಳಿ ಆಗಿರುವುದು ಖಂಡನೀಯ ಎಂದು ಮಾಜಿ ಸಂಸದ ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ವಿಚಾರವಾಗಿ ಮಾಧ್ಯಮ ಹೇಳಿಕೆ ನೀಡಿದ ಅವರು ಪುನೀತ್ ರಾಜಕುಮಾರ್ ಎಲ್ಲರಿಗೂ ಸಲ್ಲುವ ವ್ಯಕ್ತಿ, ಚುನಾವಣಾ ಸಂದರ್ಭದಲ್ಲಿ ಭಾವನಾತ್ಮಕವಾಗಿ ಬಳಸಿಕೊಂಡಂತಹದ್ದು ಸಿಂಧನೂರು ಜನತೆ ಮತ್ತು ತಾಲೂಕಿನ ದುರಂತ ಎಂದು ಹೇಳಿದರು. ಪುನೀತ್ ರಾಜಕುಮಾರ್ ಹೆಸರಿನಲ್ಲಿ ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಲೇಬೇಕು ಎಂದು ಎಸ್ ಪಿ ಮತ್ತು ಡಿಸಿ ಅವರಿಗೆ ಮನವಿ ಮಾಡಿದರು.
ಮತ್ತೊಮ್ಮೆ ಶಾಸಕ ವೆಂಕಟರಾವ್ ನಾಡಗೌಡ ಅವರು ತಮ್ಮ ದಬ್ಬಾಳಿಕೆಯನ್ನು ಸಾಧಿಸಬೇಕು ಎಂಬ ವಿಚಾರವಿಟ್ಟುಕೊಂಡು ಈ ಕಾರ್ಯಕ್ಕೆ ಮುಂದಾಗಿರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಂಧನೂರು ಜನತೆ ಈಗಾಗಲೇ ಬದಲಾವಣೆಯಾಗಿದ್ದಾರೆ, ಬುದ್ದಿವಂತರಿದ್ದಾರೆ, ತಿಳಿದುಕೊಂಡಿದ್ದಾರೆ. ಇವರಿಗೆ ಯಾವ ರೀತಿ ಬುದ್ಧಿ ಕಲಿಸಬೇಕು ಎಂಬ ತೀರ್ಮಾನವನ್ನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]