ರಾಯಚೂರು : 6 ಜನ ಜೂಜುಕೋರರನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ.
ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ನಿರತವಾಗಿದ್ದ ರೂಢಿಗತ ಜೂಜುಕೋರರನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಲ್ಲಿ ಮನವಿ ಸಲ್ಲಿಸಿ ವಿಚಾರಣೆ ನಡೆಸಿದ ಜಿಲ್ಲಾ ದಂಡಾಧಿಕಾರಿಗಳು ಪ್ರತಿಯೊಬ್ಬರಿಗೆ 6 ತಿಂಗಳುಗಳ ಕಾಲ ಗಡಿಪಾರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಟ್ಕಾ, ಇಸ್ಪೀಟ್ ಜೂಜಾಟ ತಡೆಯಲು ಜಿಲ್ಲಾ ಪೊಲೀಸ್ ನಿರಂತರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಯಾವುದೇ ರೀತಿಯ ಕಾನೂನು ಬಾಹಿರ ಜೂಜಾಟ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಿದ್ದಾರೆ.
ನಗರದ ಆಂದ್ರೂನ್ ಕಿಲ್ಲಾದ ನಿವಾಸಿ ಮಹ್ಮದ್ ಹಾಜಿ, ಸಿಂಧನೂರು ನಗರದ ಧನಗಾರವಾಡಿ ಬಡಾವಣೆಯ ನಿವಾಸಿ ವೆಂಕಟೇರ ಸರ್ದಾರ, ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಬುಡ್ಗನಾಬ್, ರಾಘವೇಂದ್ರ ಬಳಗಾನೂರು, ಮಾನವಿ ಪಟ್ಟಣದ ಕೋನಾಪುರಪೇಟೆ ನಿವಾಸಿ ಮುಕ್ತವಾ, ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದ ನರಸಪ್ಪ ಇವರುಗಳಿಗೆ ಗಡಿಪಾರು ಮಾಡಲು ಸಂಬಂಧಪಟ್ಟ ಠಾಣೆಗಳ ಪಿ.ಎಸ್.ಐ,ಮೈ ಗೆ ಆದೇಶಿಸಿಲಾಗಿದೆ. ಆದೇಶವನ್ನು ಉಲ್ಲಂಘಿಸಿ ಮರಳಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶಿಸಿದಲ್ಲಿ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು
ಎಚ್ಚರಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]