K2kannadanews.in
Crime News ರಾಯಚೂರು : ಇತ್ತೀಚೆಗೆ ರಾಯಚೂರಿನ ಮಾಣಿಕ್ ನಗರ ಬಡಾವಣೆಯಲ್ಲಿ ನಡೆದಂತಹ ಹಾರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಚೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಪುಟ್ಟ ಮಾದಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಹಳೆ ದ್ವೇಷದ ಹಿನ್ನಲೆ ಮಾಣಿಕ್ ನಗರದ ನಿವಾಸಿಯೋರ್ವನನ್ನು ಚಾಕುವಿಂದ ಇರಿದು ಕೊಲೆ ಮಾಡಲಾಗಿದೆ. ಆರಿಫ್ (20) ಕೊಲೆಗೀಡಾಗಿದ್ದ ಯುವಕ. ಕೆಲ ದಿನಗಳ ಹಿಂದೆ ಆರೋಪಿ ಮಹ್ಮದ್ ಗೌಸ್ ಅಣ್ಣನ ಮೇಲೆ ಹಲ್ಲೆ ಮಾಡಲಾಗಿತ್ತು, ಈ ಹಿನ್ನಲೆ ಅದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ಮಹ್ಮದ್ ಗೌಸ್ ಹಾಗೂ ಆತನ ಸ್ನೇಹಿತ ಮುಜಾಯಿದ್ದೀನ್ ಸೇರಿ ಅರಿಫ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟ ಮಾದಯ್ಯ ಅವರು ಈ ಒಂದು ಕೊಲೆ ಹಳೆ ದ್ವೇಷದ ಹಿನ್ನೆಲೆ ಜರುಗಿದ್ದು ಘಟನೆಗೆ ಸಂಬಂಧಪಟ್ಟಂತೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದರು.