
ರಾಯಚೂರು : ಮಾನವಿ ತಾಲೂಕಿನ ಆರೋಲಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕೆಂಬ ಸದಾಶಯದಿಂದ ಅಬಕಾರಿ ಇಲಾಖೆಯವರು ಜಾಗೃತಿ ಸಭೆಯನ್ನು ಏರ್ಪಡಿಸಲು ಕಾರಣವಾಗಿದ್ದ ನನ್ನ ಮೇಲೆ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಬೆಂಬಲಿಗರು ಹಲ್ಲೆಗೆ ಮುಂದಾಗಿದ್ದಲ್ಲದೆ ಜೀವಬೆದರಿಕೆಯನ್ನು ಹಾಕಿದ್ದಾರೆ ಎಂದು ಪ್ರಭಾಕರ ಕೊನ್ನಂಟಿ ಆರೋಪಿಸಿದರು.
ಅರೋಲಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕಳೆದ 2 ವರ್ಷದಿಂದ ಹೋರಾಟ ಪ್ರಾರಂಭಮಾಡಿದ್ದು, ಈ ಕುರಿತು ಈಗಾಗಲೇ ಪ್ರಧಾನಮಂತ್ರಿಗಳಿಗೆ ಪತ್ರವನ್ನು ಕೂಡಾ ಬರೆಯಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡ ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವಾಜ್ ಹಾಕಿದ್ದಾರೆ. ಅವರ ಬೆಂಬಲಗರು ಕೂಡಾ ತಮ್ಮ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ.ಇದೆಲ್ಲವನ್ನು ಸಹಿಸಿಕೊಳ್ಳುತ್ತಲೇ ಗ್ರಾಮದಲ್ಲಿ ಮದ್ಯಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ನಿನ್ನೆ ದಿನ ಜಾಗೃತಿ ಮೂಡಿಸಲು ಅಬಕಾರಿ ಇಲಾಖೆಯವರ ಸಹಕಾರ ಕೋರಲಾಗಿತ್ತು.
ಬಸವರಾಜ ಕಾಕರಗಲ್ ಪಿಎಸ್‌ಐ, ವೀರಮ್ಮ ಎಚ್. ಸಬ್ ಇನ್ ಸ್ಪೆಕ್ಟರ್. ಮಹೆಬೂಬ್, ಸೇರಿದಂತೆ ಆರು ಜನ ಅಬಕಾರಿ ಇಲಾಖೆಯವರು ಸಮ್ಮುಖದಲ್ಲಿಯೇ ಸಭೆ ನಡೆಯುತ್ತಿರುವಾಗಲೇ ಶಾಸಕ ರಾಜಾ ವೆಂಕಟಪ್ಪ ನಾಯಕ ಬೆಂಬಲಿಗರೆಂದು ಹೇಳಲಾದ ಸುರೇಶ ಕೊನ್ನಂಟಿ, ಪ್ರಭು ಮೇತ್ರಿ, ಚಂದ್ರಶೇಖರ ನಾಯಕ, ಹಾಗೂ ರಾಜೊಳ್ಳಿಯವನೆಂದ ಹೇಳಲಾದ ಯುವಕನೋರ್ವ ಸೇರಿ ನನ್ನ ಮೇಲೆ ಹಲ್ಲೆ ಮುಂದಾಗಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಮಾನ್ವಿ ಠಾಣೆಯಲ್ಲಿ ದೂರು ದಾಖಲಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚನ್ನಬಸವ ಅರೋಲಿ ಇದ್ದರು.
![]() |
![]() |
![]() |
![]() |
![]() |
[ays_poll id=3]