ರಾಯಚೂರು : RTPS ವಿದ್ಯುತ್ ಘಟಕಗಳು ಬಂದ್..

K 2 Kannada News
ರಾಯಚೂರು : RTPS ವಿದ್ಯುತ್ ಘಟಕಗಳು ಬಂದ್..
WhatsApp Group Join Now
Telegram Group Join Now

K2kannadanews.in

 

RTPS ರಾಯಚೂರು : ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಕುಸಿದಿದೆ ಜೊತೆಗೆ ಹೆಚ್ಚಿನ ಮಳೆ ಆಗಿರುವ ಹಿನ್ನಲೆ ಆರ್‌ಟಿಪಿಎಸ್ ಕೇಂದ್ರದ‌ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡುವ ಮೂಲಕ ವಿಶ್ರಾಂತಿ ನೀಡಲಾಗಿದೆ.

ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರ ವಿದ್ಯುತ್ ಉತ್ಪಾದಿಸುವ ಒತ್ತಡದಲ್ಲಿದ್ದ ರಾಯಚೂರು ತಾಲ್ಲೂಕಿನ ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ ಸದ್ಯ ಕೇವಲ 2 ವಿದ್ಯುತ್ ಘಟಕಗಳನ್ನು ಉತ್ಪಾದನೆಗೆ ತೊಡಗಿಸಲಾಗಿದೆ. ಪ್ರಸಕ್ತ ಹೆಚ್ಚಿದ ಮಳೆಯಿಂದಾಗಿ ವಿದ್ಯುತ್‌ ಉತ್ಪಾದನೆ ಬೇಡಿಕೆ ಗಣನೀಯ ಕುಸಿದಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಒಟ್ಟು 8 ವಿದ್ಯುತ್ ಘಟಕಗಳ ಪೈಕಿ 210 ಮೆಗಾವಾಟ್ ಸಾಮರ್ಥ್ಯದ 5ನೇ ಮತ್ತು 250 ಮೆಗಾವಾಟ್ ಸಾಮರ್ಥ್ಯದ 8ನೇ ವಿದ್ಯುತ್ ಘಟಕದಿಂದ ಮಾತ್ರ ಉತ್ಪಾದನೆ ಆಗುತ್ತಿದೆ. 210 ಮೆಗಾವಾಟ್ ಸಾಮರ್ಥ್ಯದ 6ನೇ ವಿದ್ಯುತ್ ಘಟಕ ವಾರ್ಷಿಕ ನಿರ್ವಹಣೆಗಾಗಿ ಉತ್ಪಾದನೆ ಬಂದ್ ಮಾಡಲಾಗಿದೆ. ಇನ್ನೂಳಿದ 1,2,3,4 ಮತ್ತು 7ನೇ ವಿದ್ಯುತ್ ಘಟಕಗಳ ಉತ್ಪಾದನೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ

WhatsApp Group Join Now
Telegram Group Join Now
Share This Article