K2kannadanews.in
Crime News ರಾಯಚೂರು : ಸೊಸೆಯ ಮೇಲೆಯೇ ಕಣ್ಣು ಹಾಕಿದ್ದ ಮಾವ. ಅತ್ಯಾಚಾರಕ್ಕೆ ಮುಂದಾಗಿದ್ದನ್ನು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ ಘಟನೆ ಜುಲಮಗೇರಾ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು ತಾಲೂಕಿನ ಜುಲಮಗೇರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ದುಳ್ಳಮ್ಮ (27) ಕೊಲೆಯಾದ ಮಹಿಳೆ ದುರ್ದೈವಿ ಮಹಿಳೆ. ಕಾಮಾಂಧ ಮಾವ ರಾಮಲಿಂಗಯ್ಯ ಹತ್ಯೆ ಮಾಡಿದ ಬಳಿಕ ಗ್ರಾಮದಿಂದ ಪರಾರಿಯಾಗಿದ್ದು ಆರೋಪಿಗಾಗಿ ಇಡಪನೂರು ಪೊಲೀಸರು ಬಲೆ ಬೀಸಿದ್ದಾರೆ.
ಈ ಹಿಂದೆಯೂ 2- 3 ಬಾರಿ ರಾಮಲಿಂಗಯ್ಯ ಅತ್ಯಾಚಾರಕ್ಕೆ ಯತ್ನಿಸಿದ್ದ, ಈ ವೇಳೆ ಗ್ರಾಮದ ಹಿರಿಯರು ,ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ದಿ ಹೇಳಿದ್ದರು ಸಂಧಾನ ಮಾಡಿದ್ದರು. ಆದರೇ ಈ ಬಾರಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಸೊಸೆಯ ಅತ್ಯಾಚಾರಕ್ಕೆ ಮುಂದಾಗಿದ್ದ ಮಾವ, ಇದನ್ನು ನಿರಾಕರಿಸಿ ಮನೆಯಿಂದ ಹೊರಗೆ ಹೋಗುತ್ತಿದ್ದ ಸೊಸೆಗೆ ಸಲಾಕೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದನೆ ಎಂದು ಹೇಳಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಇಡಪನೂರು ಪೊಲೀಸರು ಸ್ಥಳಿಯರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ರಾಮಾಂಜಿನೆಯ್ಯನ ಪತ್ತೆಗೆ ಬಲೆ ಬೀಸಿರುವ ಪೊಲೀಸರು.