K2kannadanews.in
Crime News ರಾಯಚೂರು : ದೀಪಾವಳಿ ಹಿನ್ನೆಲೆ ಅಂಗಡಿ ಪೂಜೆ ಮಾಡಿ ಪಟಾಕಿ ಹಚ್ಚುತ್ತಿದ್ದ ವೇಳೆ ಪಟಾಕಿ ಕಡೆಯಿಂದ ಅಂಗಡಿ ಗೆ ಬೆಂಕಿ ಬಿದ್ದು ಭಸ್ಮವಾದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಹೌದು ರಾಯಚೂರು ನಗರದ ಮಾರ್ಕೆಟ್ ಗೆ ಹೋಗುವ ರಸ್ತೆಯಲ್ಲಿನ ಸದರ ಬಜಾರ್ ಪೊಲೀಸ್ ಠಾಣೆಯ ಮುಂದಿನ ಅಂಗಡಿಗೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿದೆ. ದೀಪಾವಳಿ ಹಿನ್ನೆಲೆಯಲ್ಲಿ ಅಂಗಡಿ ಪೂಜೆ ನೆರವೇರಿಸಿ ಮುಂದಿನ ರಸ್ತೆಯಲ್ಲಿ ಪಟಾಕಿ ಹಚ್ಚುತ್ತಿದ್ದ ವೇಳೆ ಪಟಾಕಿಯ ಕಿಡಿ, ಬಟ್ಟೆ ಅಂಗಡಿ ಮೇಲ್ಬಾಗದಲ್ಲಿ ಸ್ಟಾಕ್ ಮಾಡಲಾಗಿದ್ದ ಗಡೌನ್ ಗೆ ಪಟಾಕಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಇಡೀ ಅಂಗಡಿಯೇ ಭಸ್ಮವಾಗಿದೆ.
ಹೊಂದಿಕೊಂಡ ಬೆಂಕಿ ಭಾರಿ ಪ್ರಮಾಣದಲ್ಲಿ ಉರಿಯ ತೊಡಗಿದೆ ಈ ವೇಳೆ ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ ಪಟ್ಟರು, ಬೆಂಕಿಯ ಕೆನ್ನಾಲಿಗೆಗೆ ಗಡೌನ್ ನಲ್ಲಿ ಸ್ಟಾಕ್ ಮಾಡಿದ್ದ ಬಟ್ಟೆ ಭಸ್ಮವಾಗಿದೆ. ಇದೆ ವೇಳೆ ಅದೇ ರಸ್ತೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೈಗೊಂಡಿದ್ದ ತಾಯಿ ಭುವನೇಶ್ವರಿ ಮೆರವಣಿಗೆ ಅಲ್ಲಿಯೇ ಸಾಗುತ್ತಿತ್ತು. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಮೆರವಣಿಗೆಗೆ ಅಡ್ಡಿಯಾಗಿ ಕೆಲ ಕಾಲ ಸ್ಥಗಿತವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಗಳು, ಹರಸಾಹಸದಿಂದ ಕೊನೆಗೂ ಗೌಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಂದು ಅಗ್ನಿ ಅವಘಡ ಸದರಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.