ರಾಯಚೂರು : ಸಿಟಿ ರವಿ ಕ್ಷಮೆ ಕೇಳದಿದ್ದರೇ : ಹೋರಾಟದ ಎಚ್ಚರಿಕೆ..

K 2 Kannada News
ರಾಯಚೂರು : ಸಿಟಿ ರವಿ ಕ್ಷಮೆ ಕೇಳದಿದ್ದರೇ : ಹೋರಾಟದ ಎಚ್ಚರಿಕೆ..
WhatsApp Group Join Now
Telegram Group Join Now

K2kannadanews.in

Local News ರಾಯಚೂರು : ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನ ಶಬ್ದ ಬಳಸಿದ್ದು ಖಂಡನೀಯ, ಕ್ಷಮೆ ಕೇಳದಿದ್ದರೇ ಮುಂದಿನ ದಿನಗಳಲ್ಲಿ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿ ನಿರ್ಮಲಾ ಬೆಣ್ಣೆ ಅಸಮಧಾನ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ಹೆಣ್ಣಿಗೆ ಒಂದು ದೊಡ್ಡ ಸ್ಥಾನವಿದೆ ಆದರೆ ಬಿಜೆಪಿ ಅವರ ಪಾಲಿಗೆ ಹೆಣ್ಣು ಎಂದರೆ ಕೇವಲ ಆಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ ಸಿಟಿ ರವಿ ಅವರು ಅವರ ಹಾಸಿಗೆ ಎತ್ತಲು ಹೋಗಿದ್ದರಾ ಎಂದು ಪ್ರಶ್ನಿಸಿದರು. ಎಲ್ಲರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಹೆಣ್ಣಿಗೆ ಗೌರವಕೊಡುವುದು ತಿಳಿಯುತ್ತದೆ.

ಮನೆಯಲ್ಲಿ ಅಕ್ಕ ತಂಗಿ ಮಗಳು ಹೆಂಡತಿ ಇದ್ದಿದ್ದರೆ ಇತರ ಮಾತನಾಡುತ್ತಿರಲಿಲ್ಲ. ಹೀಗೆ ಮಾತನಾಡಿರುವುದು ಸಿಟಿ ರವಿ ಅವರ ಎಂಎಲ್ಸಿ ಸ್ಥಾನಕ್ಕೆ ಗೌರವ ತರುವಂತದ್ದಲ್ಲ, ಇನಾದರೂ ಎಚ್ಚೆತ್ತುಕೊಂಡು ಸಿಟಿ ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ, ಅವರ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

WhatsApp Group Join Now
Telegram Group Join Now
Share This Article