K2kannadanews.in
Hit and run ರಾಯಚೂರು : ತಾಲ್ಲೂಕಿನಲ್ಲಿ ಹಿಟ್ ಅಂಡ್ ರನ್ ಘಟನೆ ನಡೆದಿದ್ದು ಬೈಕ್ (Bike) ಸವಾರ ಸ್ಥಳದಲ್ಲಿ ಮೃತಪಟ್ಟ (Death) ಘಟನೆಯೊಂದು ಗುರುವಾರ ಎಲೆ ಬೆಚ್ಚಾಲಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ತಾಲ್ಲೂಕಿನ ಎಲೆ ಬಿಚ್ಚಾಲಿ (Bichali) ಗ್ರಾಮದ ಬಳಿ ಘಟನೆ ನಡೆದಿದ್ದು. ಟ್ರ್ಯಾಕ್ಟರ್ (Tractor) ನಲ್ಲಿ ಟಿನ್ (Tin sheet) ಮತ್ತು ಕಬ್ಬಿಣ ಹಾಕಿಕೊಂಡು ಹೊಗುತ್ತಿದ್ದ ವೇಳೆ ಬೈಕ್ ಗೆ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಗೆ ಡಿಕ್ಕಿ ಹೊಡೆದು (accident) ಚಾಲಕ ಶಬ್ಜಾವಲಿ ಟ್ರಾಕ್ಟರ್ ಸಮೇತ ಎಸ್ಕೇಪ್ ಆಗಿದ್ದ, ಮಾರ್ಗ ಮಧ್ಯೆ ಜಮೀನುವೊಂದರಲ್ಲಿ (Land) ಟ್ರಾಕ್ಟರ್ ಬಚ್ಚಿಟ್ಟಿದ್ದು ಸ್ಥಳಿಯರು ಟ್ರ್ಯಾಕ್ಟರ್ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ರಾಯಚೂರು ತಾಲ್ಲೂಕಿನ ಬಿ.ಹನುಮಾಪುರ ಗ್ರಾಮದ ಚಂದ್ರಶೇಖರ್(21) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಡಿಪ್ಲೊಮಾ (Deploma) ಮುಗಿಸಿ ಸಿಇಟಿಗೆ (Cet) ಪ್ರಿಪೇರ್ ಆಗುತ್ತಿದ್ದ ಚಂದ್ರಶೇಖರ್. ರಾತ್ರಿ (night) ಬೈಕ್ ನಲ್ಲಿ ಚಂದ್ರಶೇಖರ್ ಸ್ವ ಗ್ರಾಮಕ್ಕೆ ಹೋಗೊವಾಗ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಘಟನೆ ನಂತರ ಚಾಲಕ ಪರಾರಿಯಾಗಿದ್ದು ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದ್ದು ಪ್ರಕರಣ ದಾಖಲಾಗಿದೆ.