
ಮಂತ್ರಾಲಯ : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಸುಶಮೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಸಲ್ಲಿಸಿ ಆರಾಧನೆ ಮಹೋತ್ಸವ ಆಚರಿಸಲಾಯಿತು.
ಹೌದು ಮಂತ್ರಾಲಯ ಶ್ರೀ ಮಠದ ಹಿಂದಿನ ಪೀಠಾಧಿಪತಿಗಳಾದ ಸುಶಮೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ, ಬೆಳಗಿನ ಪ್ರಾತಹಕಾಲದಿಂದಲೇ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಮಠದ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥರು ಯತಿಗಳ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಮಹಾಮಂಗಳಾರತಿ ಮಾಡಿದರು. ಈ ವೇಳೆ ತಿರುಪತಿ ತಿಮ್ಮಪ್ಪನ ವಸ್ತ್ರವನ್ನು ಕೂಡ ಟಿಟಿಡಿ JEO ವೀರಬ್ರಹ್ಮೇಂದ್ರ ಅವರು ಬೃಂದಾವನಕ್ಕೆ ಅರ್ಪಿಸಿದರು.
ಇನ್ನು ಬೆಳಗನಜಾವದ ಅಭಿಷೇಕದಲ್ಲಿ ಮಠದ ಪಾಠಶಾಲಾ ವಿದ್ಯಾರ್ಥಿಗಳು ಮತ್ತು ಪ್ರಾಚಾರ್ಯರು ಮಂತ್ರ ಪಠಣೆ ಮಾಡಿದರು. ಈ ಒಂದು ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ಕಣ್ತುಂಬಿಕೊಂಡು ಯತಿಗಳ ಆಶೀರ್ವಾದಕ್ಕೆ ಪಾತ್ರರಾದರು.
![]() |
![]() |
![]() |
![]() |
![]() |
[ays_poll id=3]