K2kannadanews.in
Move news ರಾಯಚೂರು : ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷೆಯ ಪೋಸ್ಟ್ ಚಿತ್ರ ರಿಲೀಸ್ ಆಗಿದ್ದು ರಾಯಚೂರಿನಲ್ಲಿ ಸಿನಿಮಾಗೆ ಭರ್ಜರಿ ರೆಸ್ಪನ್ಸ್ ಸಿಕ್ಕಿದೆ.
ಹೌದು ರಾಯಚೂರು ನ ಪೂರ್ಣಿಮಾ ಥೇಟರ್ ನಲ್ಲಿ ಕಳೆದ ರಾತ್ರಿ 9 ಕ್ಕೆ ಮೊದಲ ಶೋ ಆರಂಭಿಸಲಾಗಿದೆ. ಇನ್ನೂ ಪುಷ್ಪ 2 ಸಿನಿಮಾ ಗೆ ರಾಯಚೂರಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಅಲ್ಲು ಅರ್ಜುನ್ ನಟನೆಗೆ ಜನ ಫಿದಾ ಆಗಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡಬೇಕಾಯಿತು. ಚಿತ್ರಮಂದಿರದ ಬಳಿ ಆಗಮಿಸಿದ ಅಭಿಮಾನಿಗಳನ್ನು, ಪೊಲೀಸರು ಲಾಠಿ ಹಿಡಿದು ಸರದಿ ಸಾಲಲ್ಲಿ ನಿಲ್ಲಿಸುವುದೇ ಒಂದು ಕೆಲಸವಾಗಿತ್ತು. ಕಳೆದ ರಾತ್ರಿ 9 ಗಂಟೆಗೆ ಪುಷ್ಪ 2 ಸಿನಿಮಾ ಪ್ರದರ್ಶನ ಮಾಡಲಟಯಿತು.
ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಲ್ಲಿ ಪ್ರದರ್ಶನವಾದ ಪುಷ್ಪ 2 ಚಿತ್ರಕ್ಕೆ ಟಿಕೆಟ್ ಪಡೆಯಲು ಅಭಿಮಾನಿಗಳ ಹರಸಾಹಸ ಪಟ್ಟರು. ಆಂಧ್ರ-ತೆಲಂಗಾಣ ಗಡಿ ಭಾಗದಲ್ಲಿ ರಾಯಚೂರು ಜಿಲ್ಲೆಯಲ್ಲಿ ಇರುವ ಹಿನ್ನಲೆ ನಟ ಅಲ್ಲುಗೆ ಭರ್ಜರಿ ಹೆಚ್ಚಿನ ಫ್ಯಾನ್ಸ್ ಇರುವ ಕಾರಣಕ್ಕೆ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.