
ರಾಯಚೂರು : ನಗರದ ವಾಲ್ಮೀಕಿ ಭವನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ನಾಯಕ ಗಾರಲದಿನ್ನಿ ವಕೀಲ ಹೇಳಿದರು.
ನಗರದ ಆಶಪೂರ ರಸ್ತೆ ಬದಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿದ್ದು, ಇಲ್ಲಿಯವರೆಗೆ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಭವನದ ಸುತ್ತಲೂ ಸೆಚ್ಚತೆಯ ಕಾರ್ಯವನ್ನು ಕೈಗೊಂಡಿಲ್ಲ, ಜಿಲ್ಲೆಯಲ್ಲಿ 4 ಜನ ಸಮುದಾಯದ ಶಾಸಕರು, ಸಂಸದರು ಇದ್ದರು ಕೂಡ ಸಂಬಂಧವಿಲ್ಲದಂತೆ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜಕ್ಕೆ ಮೀಸಲಾತಿ ಸಿಕ್ಕರೂ ಕೂಡ ಅತಂತ್ರ ಸ್ಥಿತಿಯಲ್ಲಿ ಇದ್ದೇವೆ ಪಾರ್ಲಿಮೆಂಟ್ ನಲ್ಲಿ ಬಿಲ್ ಪಾಸ್ ಆಗಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಇದ್ದರು ಕೂಡ ಬಿಲ್ ಪಸ್ ಆಗಿಲ್ಲ ಎಂದರು. ವಾಲ್ಮೀಕಿ ಭವನ ಮೂಲಭೂತ ಸೌಕರ್ಯಕ್ಕೆ ಒಂದು ತಿಗಳು ಗಡವು ನೀಡುತ್ತೇವೆ ಅಷ್ಟು ರೊಳಗೆ ಮಾಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
![]() |
![]() |
![]() |
![]() |
![]() |
[ays_poll id=3]