ಏಮ್ಸ್ ಗೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ
![]() |
![]() |
![]() |
![]() |
![]() |
ರಾಯಚೂರು : ಏಮ್ಸ್ ಹೋರಾಟ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳ ವತಿಯಿಂದ ಏಮ್ಸ್ ಸ್ಥಾಪನೆಗಾಗಿ ನಾಳೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಡಾ.ಬಸವರಾಜ ಕಳಸ ತಿಳಿಸಿದರು.
ಧರಣಿ 250ದಿನಗಳನ್ನು ಪೂರೈಸುವ ಪ್ರಯುಕ್ತ ನಾಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಸರ್ಕಾರ ಕೇವಲ ಅಶ್ವಾಸನೆಗೆ ಮಾತ್ರ ಮೀಸಲಾಗಿದೆ ಏಮ್ಸ್ ಸ್ಥಾಪನೆ ಬಗ್ಗೆ ಯಾವ ವಿಷಯ ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ, ಜಿಲ್ಲೆಯಲ್ಲಿರುವ ರಾಜಕಾರಣಿಗಳಿಗೆ ರಾಜಕೀಯ ಹಿತಶಕ್ತಿ ಬೇಕು, ಹಾಗಿದ್ದಾಗ ಮಾತ್ರ ಏಮ್ಸ್ ಸ್ಥಾಪನೆಯಾಗುತ್ತದೆ, ನಮ್ಮ ಜಿಲ್ಲೆಯ 7 ಜನ ಶಾಸಕರಿಗೆ ಅಧಿವೇಶನದಲ್ಲಿ ಏಮ್ಸ್ ಸ್ಥಾಪನೆಗೆ ದ್ವನಿ ಎತ್ತಿ ಎಂದು ಕೇಳಿಕೊಂಡಿದ್ದೇವು, ಆದರೆ ಜಿಲ್ಲೆಯ ಒಂದಿಬ್ಬರು ಶಾಸಕರು ಬಿಟ್ರೆ ಯಾರು ಕೂಡ ಅಧಿವೇಶನದಲ್ಲಿ ಗಂಭೀರವಾಗಿ ದ್ವನಿ ಎತ್ತಲಿಲ್ಲ, ಮುಖ್ಯಮಂತ್ರಿಗಳು ಕೂಡ ಇದರ ಬಗ್ಗೆ ತಲೆಕೆಡಿಕೊಳ್ಳುತ್ತಿಲ್ಲ ಹಾಗಾಗಿ ನಾಳೆ ಜಿಲ್ಲೆಯ ಹಲವು ಕಡೆಗೆ ಪ್ರತಿಭಟನೆ ನಡಿಯಲಿದೆ ಎಂದರು.
ನಮ್ಮ ಜಿಲ್ಲೆಗೆ ಏಮ್ಸ್ ಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ,ಇದುವರೆಗೆ ಜಿಲ್ಲಾಧಿಕಾರಿಗಳು ನೇರವಾಗಿ ಬಂದು ಮನವಿ ಪತ್ರ ತೆಗಿದುಕೊಂಡಿಲ್ಲ, ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಒಂದು ದಿನ ಕೂಡ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು ಆದರೆ ಜಿಲ್ಲಾಧಿಕಾರಿಗಳು ಮೊದಲು ಒಂದು ದಿನ ಸರ್ಕಾರಕ್ಕೆ ಪತ್ರ ಬರೆದಿದ್ದು ಬಿಟ್ರೆ ಇದುವರಿಗೂ ಸರ್ಕಾರಕ್ಕೆ ನಮ್ಮ ಹೋರಾಟದ ಬಗ್ಗೆ ತಿಳಿಸದೆ ಇರುವುದು ಬೇಸರವಾಗಿದೆ, ನಾಳೆಯಾದ್ರು ಜಿಲ್ಲಾಧಿಕಾರಿಗಳು ಈ ಬಗ್ಗೆ ಮನವಿ ಕೊಡಲಾಗುವುದು ಆಗ ಗಂಭೀರವಾಗಿ ಪರಿಗಣಿಸಬೇಕು ಈ ವಿಚಾರವನ್ನು ಸರಕಾರಕ್ಕೆ ಪತ್ರಬರೆದು ಒತ್ತಡ ಹಾಕಬೇಕೆಂದು ಒತ್ತಾಯಿಸಿದರು.
![]() |
![]() |
![]() |
![]() |
![]() |