This is the title of the web page
This is the title of the web page
Local News

ಬಾಲ ಕಾರ್ಮಿಕ ನಿಷೇಧಕ್ಕಾಗಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ


ರಾಯಚೂರು. ಬಾಲ ಕಾರ್ಮಿಕ ನಿಷೇಧಕ್ಕಾಗಿ ಸಾಕಷ್ಟು ಕಾಯ್ದೆಗಳಿದ್ದು ಅಧಿಕಾರಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ, ಸಮನ್ವಯತೆಯಿಂದ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡುವುದರ ಜೊತೆಗೆ ಶಿಕ್ಷಣ ಒದಗಿಸಿ ಕೊಡುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ದಯಾನಂದ ಬೇಲೂರೆ ಅವರು ಹೇಳಿದರು.

ಹೊಸ ವರ್ಷಾಚರಣೆ ವೇಳೆ ಕೋವಿಡ್ 4ನೇ ಅಲೆ ಬಗ್ಗೆ ಗಮನವಿರಲಿ..

ನಗರದ ಕೃಷಿ ವಿಶ್ವ ವಿದ್ಯಾಲಯದ ಆರ್ಗನಿಕ್ ಫಾರ್ಮಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಭಾಂಗ ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮತ್ತು ಜಿಲ್ಲಾ ವಾಲ ಕಾರ್ಮಿಕ ಯೋಜ ನೆ ಸಂಯುಕ್ತ ಆಶ್ರಯದಲ್ಲಿ ವಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಕಲಂ 17ರ ಅಡಿ ಯಲ್ಲಿ ನೇಮಕಗೊಂಡ ನಿರೀಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಬಾಲ ಕಾರ್ಮಿಕತೆ ನಿಷೇಧಕ್ಕಾಗಿ ಸುಮಾರು ವರ್ಷಗಳಿಂದ ಸಾಕಷ್ಟು ಕೆಲಸ ಮಾಡುತ್ತಿದ್ದು, ಬಾಲ ಕಾರ್ಮಿಕತೆ ನಿಷೇಧಕ್ಕಾಗಿ ಕಾಯ್ದೆಗಳಿದ್ದು, ಕುಟುಂಬದ ಬಡತನದಲ್ಲಿ ಮಕ್ಕಳು ಶಿಕ್ಷಣವನ್ನು ತೊರೆದು ಕೆಲಸಗಳಿಗೆ ಹೋಗಿತ್ತಿದ್ದಾರೆ, ಮಕ್ಕಳು ಒದುವ ಹಂತದಲ್ಲಿ ಕೆಲಸ ಮಾಡಿದರೆ ಅದು ಬಾಲ ಕಾರ್ಮಿಕರಾಗುತ್ತಾರೆ, ಬಾಲ ಕಾರ್ಮಿಕ ನಿಷೇಧಕ್ಕಾಗಿ ಕೆಲಸಗಳು ನಡೆಯುತ್ತಿವೆ ಎಂದರು.

ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಸಾಕಷ್ಟು ಸಭೆ ನಡೆಸಿ ಬಾಲ ಕಾರ್ಮಿಕ ನಿಷೇಧಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಇತ್ತೀಚೆಗೆ ಶಾಲೆಯಿಂದ ಹೊರಗುಳಿದು ಕೆಲಸಕ್ಕೆ ಹೋಗುತ್ತಿರುವ 5 ಜನ ಮಕ್ಕಳನ್ನು ರಕ್ಷಣೆ ಮಾಡಿ ಶಾಲೆಗೆ ಕಳುಹಿಸುವ ಕೆಲಸ ಮಾಡಲಾಗಿದೆ, ಮತ್ತು ಪೋಷಕರಿಗೆ ಮನದಟ್ಟು ಮಾಡಲಾಗಿದೆ ಎಂದು ತಿಳಿಸಿದರು.

ಮಕ್ಕಳು ಇಂದು ತಮ್ಮ ಕುಟುಂಬದ ಬಡತನದ ಸಂದರ್ಭದಲ್ಲಿ ಪೋಷಕರು ಕಳುಹಿಸುತ್ತಿದ್ದಾರೆ, ಮಕ್ಕಳಿಗೆ ಶಿಕ್ಷಣ ಒದಗಿಸುವ ಕುರಿತು ಪೋಷಕ ರಿಗೆ ಮನದಟ್ಟಾಗುವಂತೆ ಮನವಿರಿಕೆ ಮಾಡಬೇ ಕು, ಇದರಿಂದ ಬಾಲ ಕಾರ್ಮಿಕತೆ ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಉಪಾ ಅಧೀಕ್ಷಕ ವೆಂಕಟೇಶ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಾಲೆಯಿಂದ ಮಕ್ಕಳು ಹೊರಗುಳಿದು ಜಮೀನು ಮತ್ತು ಇನ್ನಿತರ ಕೆಲಸಗಳಿಗೆ ತೆರಳುತ್ತಿದ್ದಾರೆ, ಅವರನ್ನು ವಾಹನಗಳು ಮೂಲಕ ತೆಗೆದುಕೊಂಡು ಹೋಗುತ್ತಿರುವ ವೇಳೆ ವಾಹನಗಳ ಚಾಲಕರ ವಿರುದ್ಧ ದೂರು ದಾಖಲಿಸಿ ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದರು.

ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಆಧರಿಸಿ ಶಾಲೆ ಯಿಂದ ಹೊರಗುಳಿದ ಮಕ್ಕಳು ಕುರಿತು ಸಭೆ ನಡೆಸಿ ಜಮೀನು ಕೆಲಸಕ್ಕೆ ಹೋಗದಂತೆ ತಡೆಯ ಬಹುದು ಮತ್ತು ಪೋಷಕರಿಗೆ ಅರಿವು ಮೂಡಿಸ ಬಹುದು ಕೆಳ ಹಂತದಿಂದ ಕೆಲಸ ಮಾಡಿದಾಗ ಮಾತ್ರ ಬಾಲ ಕಾರ್ಮಿಕತೆ ನಿಷೇಧ ಮಾಡಲು ಸಾಧ್ಯವೆಂದರು.
ಅಪರ ಜಿಲ್ಲಾಧಿಕಾರಿ ದುರುಗೇಶ ಮಾತನಾಡಿ, ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳು ಬಗ್ಗೆ ಆರಂಭದಿಂದಲೇ ಶಿಕ್ಷಣ ಒದಗಿಸಿಕೊಡುವ ಕೆಲಸ ಮಾಡಬೇಕು, ಬಡತನದಲ್ಲಿವ ಕುಟುಂಬಗಳು ತಮ್ಮ ಉಪ ಜೀವನಕ್ಕಾಗಿ ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿ ಸುತ್ತಾರೆ, ಅದನ್ನು ನಿಲ್ಲಿಸಬೇಕು, ಪ್ರಾಥಮಿಕ, ಪ್ರೌಢ, ಮತ್ತು ಉನ್ನತ ಶಿಕ್ಷಣದಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸಿದರೆ ಬಾಲ ಕಾರ್ಮಿಕತೆಯಿಂದ ದೂರ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸಬೇಕು ಎಂದರು. ತಾಲೂಕು, ನಗರಸಭೆ, ಮತ್ತು ಜಿಲ್ಲಾ ಮಟ್ಟದಲ್ಲಿ ಟಾಸ್ಕ ಪೋರ್ಸ್ ಸಮಿತಿಗಳಿದ್ದು ಸಮಿತಿಗಳ ಮುಖ್ಯಸ್ಥರಿಗೆ ಜವಾಬ್ದಾರಿ ವಹಿಸಿದೆ, ಸಮಿತಿಯ ಸದಸ್ಯರು ಸಹ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.


[ays_poll id=3]