![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದರ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾರತದ ಪ್ರಧಾನಿ ಒಬ್ಬ ಹೇಡಿ ಎಂದು ಆಕ್ರೋಶ ವ್ಯಕ್ತಪಡಿಸಿ, ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ದಾಳಿಗೆ ಮೋದಿ ನೇತೃತ್ವ ವಹಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ರಾಷ್ಟ್ರೀಯ ಏಕತೆಗಾಗಿ ಸಾವಿರಾರು ಕಿಲೋಮೀಟರ್ ನಡೆದು ಹುತಾತ್ಮರಾದ ಪ್ರಧಾನಮಂತ್ರಿಗಳ ಪುತ್ರ ದೇಶವನ್ನು ಎಂದಿಗೂ ಅವಮಾನಿಸಲು ಸಾಧ್ಯವಿಲ್ಲ. ನನ್ನ ಸಹೋದರನನ್ನು ಹುತಾತ್ಮನ ಮಗ, ದೇಶದ್ರೋಹಿ ಮತ್ತು ಮೀರ್ ಜಾಫರ್ ಎಂದು ಕರೆಯುತ್ತಾರೆ. ನಮ್ಮ ತಾಯಿಯನ್ನು ನಮ್ಮ ಕುಟುಂಬವನ್ನು ಪ್ರತಿದಿನ ಅವಮಾನಿಸುತ್ತಾರೆ. ಆದರೂ ಅವರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಾಗುವುದಿಲ್ಲ ಎಂದಿದ್ದಾರೆ.
ದೆಹಲಿ ಮಹಾತ್ಮಾ ಗಾಂಧಿಯವರ ಸ್ಮಾರಕ ಇರುವ ರಾಜ್ ಘಾಟ್ ನಲ್ಲಿ ಸಂಕಲ್ಪ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸತ್ಯಾಗ್ರಹವನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿಯವರು ಮಾತನಾಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]