ಸ್ತನ ಕ್ಯಾನ್ಸರ್‌ ಜಾಗೃತಿಗೆ ಪಿಂಕ್ ಪವರ್ ರನ್ ವಿಶ್ವ ಗಿನ್ನಿಸ್ ದಾಖಲೆಗೆ ಸಿದ್ಧತೆ..

K 2 Kannada News
ಸ್ತನ ಕ್ಯಾನ್ಸರ್‌ ಜಾಗೃತಿಗೆ ಪಿಂಕ್ ಪವರ್ ರನ್ ವಿಶ್ವ ಗಿನ್ನಿಸ್ ದಾಖಲೆಗೆ ಸಿದ್ಧತೆ..
WhatsApp Group Join Now
Telegram Group Join Now

K2kannadanews.in

Breast Cancer Awareness ಬೆಂಗಳೂರು : ವಿಶ್ವದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಸುಧಾರೆಡ್ಡಿ ಫೌಂಡೇಶನ್‌ ಮತ್ತು ಮೆಘಾ ಇಂಜಿನಿಯರಿಂಗ್‌ ಅಂಡ್‌ ಇನ್ಫ್ರಾಸ್ಟ್ರಕ್ಚರ್‌ (ಎಂಇಐಎಲ್‌) ಫೌಂಡೇಶನ್‌ ಸೆಪ್ಟೆಂಬರ್ 29ರಂದು ಬೃಹತ್‌ ಪ್ರಮಾಣದ ʼಪಿಂಕ್‌ ಪವರ್‌ ರನ್‌ʼ ಏರ್ಪಡಿಸಿದ್ದು ಆ ಮೂಲಕ ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷೆ ಸುಧಾರೆಡ್ಡಿ‌ ಹೇಳಿದರು.

ಈ ಸಂಬಂಧ ಮಾತನಾಡಿದ ಸುಧಾರೆಡ್ಡಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾರೆಡ್ಡಿ ಅವರು ಓಲಂಪಿಕ್ಸ್‌ ಪದಕ ವಿಜೇತ ಕ್ರೀಡಾಪಟು ಪಿ.ವಿ. ಸಿಂಧು, “ಪಿಂಕ್ ಪವರ್ ರನ್ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿರುತ್ತದೆ- 3 ಕಿಮೀ, 5 ಕಿ.ಮೀ ಮತ್ತು 10 ಕಿ.ಮೀ ಓಟದಲ್ಲಿ ವಿವಿಧ ವಯಸ್ಸಿನವರು ಈ ಜಾಗೃತಿ ಓಟದಲ್ಲಿ ಭಾಗವಹಿಸಬಹುದಾಗಿದ್ದು, ಓಟದಲ್ಲಿ ಪಾಲ್ಗೊಳ್ಳುವವರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು. ಈ ಬೃಹತ್‌ ಓಟ ಮತ್ತು ಗುಲಾಬಿ ಪಕ್ಷಿ ಸೃಷ್ಟಿ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸುವ ಉದ್ಧೇಶ ಹೊಂದಲಾಗಿದ್ದು, ಇದರಿಂದ ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲಾಗುವುದು. ತಮ್ಮ ಈ ಪ್ರಯತ್ನದಲ್ಲಿ ಪಾಲ್ಗೊಳ್ಳಲಿರುವ ಹಿರಿಯ- ಕಿರಿಯರು ಸಂಪೂರ್ಣವಾಗಿ ಗುಲಾಬಿ ಬಣ್ಣದಲ್ಲಿ ಅಲಂಕರಿಸಲಾದ ಪಕ್ಷಿಯ ಬೃಹತ್ ಮಾನವ ಚಿತ್ರವನ್ನು ರಚಿಸುವ ಮೂಲಕ ಇಡೀ ಜಗತ್ತಿಗೆ ಸ್ಥನ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿನ ಐಕ್ಯತೆ ಪ್ರದರ್ಶಿಸಲಾಗುವುದು ಎಂದರು.

ಯುನಿಸೆಫ್‌ನ ಅಂತಾರಾಷ್ಟ್ರೀಯ ಮಂಡಳಿಯ ಸದಸ್ಯೆ ಮತ್ತು ಸಮಾಜ ಸೇವಕಿಯಾಗಿರುವ ಸುಧಾರೆಡ್ಡಿ, ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ ಮತ್ತು ನಿಯಮಿತ ತಪಾಸಣೆಯ ಮಹತ್ವವನ್ನು ಒತ್ತಿ ಹೇಳಿ, ಈ ಬಗ್ಗೆ ಅರಿವು ಅಗತ್ಯವಾಗಿದೆ. “ಪಿಂಕ್ ಪವರ್ ರನ್ ಕೇವಲ ಒಂದು ಓಟವಲ್ಲ, ಇದು ಬದುಕುಳಿದವರಿಗೆ ತಮ್ಮ ಸ್ಪೂರ್ತಿದಾಯಕ ಕ್ಷಣಗಳನ್ನು ಹಂಚಿಕೊಳ್ಳಲು, ಇತರರಿಗೆ ಸ್ಫೂರ್ತಿ ನೀಡಲು ಮತ್ತು ಸಮುದಾಯ ಬೆಂಬಲವನ್ನು ಕೃಢೀಕರಿಸಲು ಒಂದು ವೇದಿಕೆಯಾಗಲಿದೆ. ಒಗ್ಗಟ್ಟಿನಿಂದ ಒಗ್ಗೂಡುವ ಮೂಲಕ, ನಾವು ಅಡೆತಡೆಗಳನ್ನು ನಿವಾರಿಸಬಹುದು, ಕಳಂಕಗಳನ್ನು ಎದುರಿಸಬಹುದು ಮತ್ತು ವ್ಯಕ್ತಿಗಳು ತಮ್ಮ ಆರೋಗ್ಯದ ಉಸ್ತುವಾರಿಯನ್ನು ವಹಿಸಿಕೊಳ್ಳಲು ಅಧಿಕಾರ ನೀಡಬಹುದು” ಇವು ಪಿಂಕ್‌ ರನ್‌ ಹಿಂದಿನ ಉದ್ದೇಶಗಳು” ಎಂದು ವಿವರಿಸಿದರು.

ಪಿಂಕ್‌ ಪವರ್‌ ರನ್‌ನಲ್ಲಿ ಭಾಗವಹಿಸಲು ನೋಂದಾಯಿಸಲು ಅಥವಾ ಈವೆಂಟ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, www.pinkpowerrun.in ವೆಬ್‌ ಸೈಟ್‌ಗೆ ಭೇಟಿ ನೀಡುವಂತೆ ಕ್ರೀಡಾಪಟು ಪಿ.ವಿ. ಸಿಂಧು ಅವರು ಮನವಿ ಮಾಡಿದರು.

WhatsApp Group Join Now
Telegram Group Join Now
Share This Article