
K2 ನ್ಯೂಸ್ ಡೆಸ್ಕ್ : ಪ್ರಪಂಚದಲ್ಲಿ ನಾನು ತಳಿಯ ನಾಯಿಗಳಿವೆ. ಮುದ್ದಾಗಿ ಕಾಣುವ ನಾಯಿಗಳು ಒಂದು ಕಡೆಯಾದರೆ, ಅಷ್ಟೇ ಆಕ್ರಮಣಕಾರಿ ಮತ್ತು ಸಿಂಹವನ್ನೇ ಕೊಲ್ಲುವಂತಹ ಶಕ್ತಿ ಇರುವ ನಾಯಿಗಳು ಇನ್ನೊಂದು ಕಡೆ ಇವೆ. ಕೆಲವು ನಾಯಿಗಳು ಬೇಕಾದರೆ ಸಿಂಹವನ್ನೇ ಭೇಟೆ ಆಡುವಷ್ಟು ಶಕ್ತಿಶಾಲಿಯಾಗಿರುತ್ತವೆ.
ರೊಟ್ವೀಲರ್: ಈ ಒಂದು ನಾಯಿಯು ಪ್ರಚಂಡ ಶಕ್ತಿಯನ್ನು ಹೊಂದಿದೆ. ದೇಹ ರಚನೆಯು ಬಾಡಿ ಬಿಲ್ಡರ್ ಇದ್ದಂತೆ. ಸಿಂಹವನ್ನು ಕೂಡ ತನ್ನ ಅಪಾಯಕಾರಿ ದವಡೆಯಿಂದ ಕಚ್ಚಿ ಸಾಯಿಸುತ್ತದೆ ಎಂದು ಹೇಳಲಾಗುತ್ತದೆ. ಒಮ್ಮೆ ಇದು ಕಚ್ಚಿದರೆ ಮಾಂಸ ಸಮೇತ ಕಡಿಯುತ್ತದೆ.
ಟಿಬೆಟಿಯನ್ ಮ್ಯಾಸ್ಟಿಫ್: ಈ ಒಂದು ನಾಯಿಯನ್ನು ಅನ್ನು ನಾಯಿಗಳ ರಾಜ ಎಂದು ಕರೆಯಲಾಗುತ್ತದೆ. ಈ ನಾಯಿಗಳು ತಮ್ಮ ಮಾಲೀಕರೊಂದಿಗೆ ಇರಲು ಇಷ್ಟಪಡುತ್ತವೆ. ಬಹಳ ರಕ್ಷಣಾತ್ಮಕ. ಆದ್ದರಿಂದ ಈ ನಾಯಿಗಳು ತಮ್ಮ ಮಾಲಿಕನ ಸಲುವಾಗಿ ಏನು ಬೇಕಾದರೂ ಮಾಡುತ್ತದೆ.
ಬೋರ್ಬೋಲ್: ಈ ಒಂದು ತಳಿಯ ನಾಯಿ ದಕ್ಷಿಣ ಆಫ್ರಿಕಾದಲ್ಲಿ. ಇದು ಫಿಟ್ನೆಸ್ ಮತ್ತು ಆಕ್ರಮಣಶೀಲತೆಗೆ ಬಹಳ ಪ್ರಸಿದ್ಧವಾಗಿದೆ. ಭೇಟೆ ಆಡಲು ಈ ನಾಯಿಯನ್ನು ಬಳಸುತ್ತಾರೆ.
ಕಾಕೇಶಿಯನ್ ಶೆಫರ್ಡ್ : ಈ ಒಂದು ನಾಯಿ ತನ್ನ ಶಕ್ತಿಗೆ ತುಂಬಾ ಹೆಸರುವಾಸಿಯಾಗಿದೆ. ಇದರ ರೋಮಗಳು ತುಂಬಾ ಆಕರ್ಷಕವಾಗಿರುತ್ತದೆ.ಇದು ಆಕ್ರಮಣಕಾರಿಯಾಗಿರುತ್ತದೆ.
ಕಂಗಲ್: ಈ ಒಂದು ನಾಯಿಯ ತಳಿಯಾಗಿದೆ. ಈ ನಾಯಿಗಳು ವಿಪತ್ತಿನ ಸಂದರ್ಭದಲ್ಲಿ ತಮ್ಮ ಮಾಲೀಕರನ್ನು ರಕ್ಷಿಸಲು ಮತ್ತು ತಮ್ಮ ಪ್ರಾಣವನ್ನು ನೀಡಲು ಹಿಂಜರಿಯುವುದಿಲ್ಲ.
ಡೊಗೊ ಅರ್ಜೆಂಟಿನೊ : ಈ ಒಂದು ಅರ್ಜೆಂಟೀನಾ ಮೂಲದ ನಾಯಿ ತಳಿಯಾಗಿದೆ. ಓಟ ಮತ್ತು ಬೇಟೆಯಲ್ಲಿ ನುರಿತ ಈ ನಾಯಿಗಳು ಇವುಗಳಾಗಿದ್ದು ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುತ್ತದೆ.
cane corso : : ಈ ಒಂದು ಇಟಾಲಿಯನ್ ನಾಯಿಯಾಗಿದ್ದು ಈ ನಾಯಿಯನ್ನು ಭೇಟೆಯಾಡಲು ಬಳಸುತ್ತಾರೆ. ಈಗ ಫ್ಯಾಶನ್ಗಾಗಿ ಇದನ್ನು ಸಾಕಲಾಗುತ್ತದೆ.
ಇಂಗ್ಲೀಷ್ ಮ್ಯಾಸ್ಟಿಫ್ : ಈ ಒಂದು ನಾಯಿಗಳು ಒಂಟಿಯಾಗಿ ಬದುಕಲು ಇಷ್ಟಪಡುತ್ತವೆ. ಈ ನಾಯಿಯನ್ನು ಅತಿದೊಡ್ಡ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.
![]() |
![]() |
![]() |
![]() |
![]() |
[ays_poll id=3]