ಪವರ್ ಸ್ಟಾರ್ ಅಪ್ಪು ಬರ್ತಡೆ ಸ್ಟೇಟಸ್ ಗೆ ಕಮೆಂಟ್ ತಗಿ ಎಂದಿದ್ದಕ್ಕೆ ಮನೆಗಿ ನುಗ್ಗಿ ಹಲ್ಲೆ..

K 2 Kannada News
ಪವರ್ ಸ್ಟಾರ್ ಅಪ್ಪು ಬರ್ತಡೆ ಸ್ಟೇಟಸ್ ಗೆ ಕಮೆಂಟ್ ತಗಿ ಎಂದಿದ್ದಕ್ಕೆ ಮನೆಗಿ ನುಗ್ಗಿ ಹಲ್ಲೆ..
WhatsApp Group Join Now
Telegram Group Join Now

K2kannadanews.in

Crime news ರಾಯಚೂರು : ಪವರ್ ಸ್ಟಾರ್ (power star) ಪಿನಿತ್ ರಾಜಕುಮಾರ್ (punit rajkumar) ಬರ್ತಡೆ ಸ್ಟೇಟಸ್ (Stats) ಗೆ ಮಾಡಿದ ಕಮೆಂಟ್ (Comment) ತೆಗಿ ಎಂದಿದ್ದಕ್ಕೆ ನಗರ ಸಭೆ ಸದಸ್ಯರ ಪತಿ ಮತ್ತು ಪುತ್ರ ಮನೆಗಿ ನುಗ್ಗಿ, ಪತಿ ಪತ್ನಿ ಮೇಲೆ ಹಲ್ಲೆ (Attacked) ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ದೇವಿನಗರ ಮನೆಯೊಂದರಲ್ಲಿ ಜರುಗಿದೆ.

ಹೌದು ರಾಯಚೂರು ನಗರದ ದೇವಿನಗರದ ಮನೆಯಲ್ಲಿ ಘಟನೆ ಜರುಗಿದ್ದು, ನ್ಯಾಯಕ್ಕಾಗಿ ಹಲ್ಲೆಗೊಳಗಾದವರು ಎಸ್ಪಿ ಪುಟ್ಟಮಾದಯ್ಯ ಅವರಿಗೆ ದೂರು ಸಲ್ಲಿಸಿ ನ್ಯಾಯ ಒದಗಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ವಾರ್ಡ ನಂಬರ್ 28 ರಲ್ಲಿ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬ ಆಚರಣೆ ಮಾಡಿ ಅಲ್ಲಿ ತೆಗೆದ ಪೋಟೊ ಮತ್ತು ವೀಡಿಯೋಗಳನ್ನು ಮಹೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದಕ್ಕೆ ಈ ಬಗ್ಗೆ ಪ್ರಭಾವಿ ರಾಜಕೀಯ ಮುಖಂಡ ತಿಮ್ಮಾರೆಡ್ಡಿ ಪುತ್ರ ಸಂತೋಷ ಕಾಮೆಂಟ್ ಮಾಡಿದ್ದ, ಇದನ್ನು ತೆಗೆಯುವಂತೆ ಹೆಳಿದ್ದಕ್ಕೆ ತಂದೆ, ಮಗ ಇಬ್ಬರು ಅವಾಚ್ಯ ಶಬ್ದಗಳಿಂದ ಮಾತನಾಡಿ ಬೆದರಿಕೆ ಹಾಕಿದ್ದರು. ಅಷ್ಟಕ್ಕೆ ಬಿಡದೆ ಸುಮಾರು 30ಕ್ಕೂ ಹೆಚ್ಚು ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಮನೆ ಮೇಲೆ ಇಟ್ಟಿಗೆ, ಕಲ್ಲು ತೂರಿ, ಮನೆ ಬಾಗಿಲು ಮುರಿದು ಒಳಗೆ ನುಗ್ಗಿ, ಮನೆಯಲ್ಲಿದ್ದ ಮಹೇಶ ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ, ಅಲ್ಲದೆ ಜಗಳ ಬಿಡಿಸಲು ಬಂದ ಅಕ್ಕ ಪಕ್ಕದ ಮನೆಯವರ ಮೇಲೆಯೂ ಹಲ್ಲೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಎಸ್ಪಿ ಪುಟ್ಟ ಮಾದಯ್ಯ ಅವರಿಗೆ ದೂರು ನೀಡಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article