
K2 ನ್ಯೂಸ್ ಡೆಸ್ಕ್ : ದೊಡ್ಡಬಳ್ಳಾಪುರದಲ್ಲಿ ಕ್ರಿಕೆಟ್ ಟೂರ್ನಮೆಂಟ್ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ಯುವಕರು ಚಾಕು ಇರಿತದಿಂದ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೂ ರಾಜಕೀಯಪ್ರೇರಿತ ಯಾವುದೇ ಕ್ರಿಕೆಟ್ ಟೂರ್ನಮೆಂಟ್ ನಡೆಸದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಯಾರೋ ರಾಜಕಾರಣಿ ಪ್ರಾಯೋಜಕತ್ವ ನೀಡುತ್ತಾರೆ ಎಂದು ಟೂರ್ನಮೆಂಟ್‌ಗಳನ್ನು ಆಯೋಜಿಸಿದರೆ ಅನವಶ್ಯವಾಗಿ ಪೊಲೀಸ್ ಕೇಸ್ ಎದುರಿಸಬೇಕಾದ ಪ್ರಸಂಗ ಎದುರಾಗಬಹುದು. ಕ್ರಿಕೆಟ್ ಪಂದ್ಯಾವಳಿ ವೇಳೆ ಇಬ್ಬರು ಯುವಕರ ಹತ್ಯೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ಚುನಾವಣೆ ಕೊನೆಗೊಳ್ಳುವ ತನಕ ರಾಜಕೀಯ ಪ್ರಾಯೋಜಿತ ಕ್ರಿಕೆಟ್ ಪಂದ್ಯಾವಳಿಗೆ ನಿಷೇಧ ಹೇರಲಾಗಿದೆ. ಯುವಕರ ಮಧ್ಯೆ ಸಂಘರ್ಷ ತಪ್ಪಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಮತಬೇಟೆಯ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳು ಕ್ರಿಕೆಟ್ ಪಂದ್ಯಾವಳಿಗೆ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿವೆ.
![]() |
![]() |
![]() |
![]() |
![]() |
[ays_poll id=3]