K2kannadanews.in
MUDA SCAM ನ್ಯೂಸ್ ಡೆಸ್ಕ್ : ಮೂಡ ಹಗರಣಕ್ಕೆ ಸಂಬಂದಿಸಿದಂತೆ ಸಿಎಂ (CM) ಸಿದ್ದರಾಮಯ್ಯ (Siddaramayya) ಹಾಗೂ ಪತ್ನಿ (Wife) ಪಾರ್ವತಿ ವಿರುದ್ಧ ಎಫ್ಐಆರ್ (FIR) ದಾಖಲಿಸಿರುವ, ಮೈಸೂರು (Mysore) ಲೋಕಾಯುಕ್ತ (Lokayukth) ಪೊಲೀಸರು, ತನಿಖೆಗಾಗಿ 4 ತಂಡ ರಚನೆ ಮಾಡಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಎಸ್.ಮಾಲತೇಶ್ರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಶನಿವಾರ ತುರ್ತು ಸಭೆ ನಡೆಸಿದ ಎಸ್ಪಿ ಉದೇಶ್, ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೋರ್ಟ್ನಿಂದ ನೀಡಿರುವ ದಾಖಲೆಗಳು ಹಾಗೂ ದೂರಿನಲ್ಲಿ ಅಡಕವಾಗಿರುವ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಮುಂದಿನ ಒಂದೆರಡು ದಿನಗಳ ಕಾಲ ದಾಖಲೆಗಳ ಸಂಪೂರ್ಣ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ. 2021ರಲ್ಲಿ ಪತ್ನಿ ಪಾರ್ವತಿ ಅವರಿಗೆ ಬದಲಿ 14 ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಿ ರುವ ಬಗ್ಗೆ ತನಿಖೆಯಾಗಲಿದೆ. ಹಾಗೆಯೇ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿದ್ದರಾಮಯ್ಯ ಅವರ ಪಾತ್ರ ಹಾಗೂ ಅವರ ಎಂದುಂಬದ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.