This is the title of the web page
This is the title of the web page
State News

ಜ್ಞಾನ ಯೋಗಾಶ್ರಮದಲ್ಲಿ ಪೊಲೀಸ್ ಅಲರ್ಟ್


K2 ನ್ಯೂಸ್ ಡೆಸ್ಕ್ : ಜ್ಞಾನ ಯೋಗಾಶ್ರಮ ಮಠಕ್ಕೆ ಸಮಯ ಕಳೆದಂತೆಲ್ಲ ಭಕ್ತರ ಆಗಮನ ಹೆಚ್ಚಾಗುತ್ತಿದೆ, ಇನ್ನೊಂದು ಕಡೆ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಮಠಕ್ಕೆ ಧಾವಿಸಿದ್ದಾರೆ.

ಶ್ರೀಗಳ ಅನಾರೋಗ್ಯದಿಂದ ಆತಂಕಗೊಂಡಿರುವ ಭಕ್ತರು ಯೋಗಾಶ್ರಮದತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಆಶ್ರಮದ ಆವರಣದಿಂದ ಭಕ್ತರನ್ನು ಹೊರಕ್ಕೆ ಕಳುಹಿಸುತ್ತಿದ್ದಾರೆ. ಆಶ್ರಮದ ಸುತ್ತಮುತ್ತ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು, ಸುತ್ತ ಬ್ಯಾರಿಕೇಡ್ ಹಾಕಿ ಲೈಟ್ ವ್ಯವಸ್ಥೆ ಮಾಡಲಾಗುತ್ತಿದೆ.

ಈಗಾಗಲೇ ಹೆಲ್ತ್​​ ಬುಲೆಟಿನ್​​​ ರಿಲೀಸ್​ ಆಗಿದ್ದು, ಶ್ರೀಗಳ ಉಸಿರಾಟ ಏರಿಳಿತ ಆಗುತ್ತಿದೆ . ಶ್ರೀಗಳ ಪಲ್ಸ್​ ರೇಟ್ ಕೂಡಾ ಕಡಿಮೆಯಾಗಿದೆ. ಆಕ್ಸಿಜನ್​ ರೇಟ್​ ಕೂಡಾ ಕುಸಿಯುತ್ತಾ ಇದೆ, ಬೆಳಗ್ಗೆಯಿಂದಲೂ ಶ್ರೀಗಳು ಆಹಾರ ಸೇವನೆ ಮಾಡಿಲ್ಲ ಎಂದು ಡಾ.ಮಲ್ಲಣ್ಣ ಮೂಲಿಮನಿ ತಿಳಿಸಿದ್ದಾರೆ.

ಈ ಬಗ್ಗೆ ಐದನೇ ಹೆಲ್ತ್​​ ಬುಲೆಟಿನ್ ಅನ್ನು​ ಡಾ.ಮಲ್ಲಣ್ಣ ಮೂಲಿಮನಿಯಿಂದ ರಿಲೀಸ್ ಮಾಡಿದ ವೈದ್ಯರು, ಸಿದ್ದೇಶ್ವರ ಶ್ರೀಗಳಿಗೆ ಉಸಿರಾಡಲು ತೊಂದರೆ ಆಗಿದ್ದರಿಂದ ಆಕ್ಸಿಜನ್​ ನೀಡಿದ್ದೇವೆ, ಬಿಪಿ ಕಡಿಮೆಯಾಗಿದೆ, ನಾಡಿ ಮಿಡಿತ ಕಡಿಮೆಯಾಗಿದೆ, ಆದರೂ ಶ್ರೀಗಳು ಸ್ಟೇಬಲ್​ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


[ays_poll id=3]