ಗೂಗಲ್ ಗ್ರಾಮದ ರೈತರ ಸಂಕಷ್ಟ : ಮುಳುಗಿದ ಪಂಪ್ ಸೆಟ್ ಗಳು..

K 2 Kannada News
ಗೂಗಲ್ ಗ್ರಾಮದ ರೈತರ ಸಂಕಷ್ಟ : ಮುಳುಗಿದ ಪಂಪ್ ಸೆಟ್ ಗಳು..
WhatsApp Group Join Now
Telegram Group Join Now

K2kannadanews.in

Plight of farmers ದೇವದುರ್ಗ : ಕೃಷ್ಣ ನದಿಯಲ್ಲಿ (Krishna river) ಹೆಚ್ಚಿದ ನೀರಿನ ಹೊರಹರಿವಿನಿಂದ (Water outflow) ಗೂಗಲ್ ಗ್ರಾಮದಲ್ಲಿ ರೈತರ (Farmers) ಪರದಾಡಿದ ಪ್ರಸಂಗ ನಡೆದಿದೆ, ಗೂಗಲ್ ಬ್ರಿಜ್ ಕಂ ಬ್ಯಾರೇಜ್ (bridge co barge) ಗೇಟ್ಗಳನ್ನು ಅರ್ಧ ತೆಗೆದ ಹಿನ್ನೆಲೆಯಲ್ಲಿ ರೈತರ ಪಂಪ್ಸೆಟ್ಟುಗಳು ಮುಳುಗಡೆಯಾಗುತ್ತಿವೆ ಎಂದು ಅಸಮಧಾನ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಗೂಗಲ್ ಗ್ರಾಮದಲ್ಲಿ ರಾತ್ರಿ ಇಡಿ ರೈತರು ಸೇತುವೆ ಮೇಲೆ ಅಧಿಕಾರಿಗಳಿಗೆ ಕಾದು ಕುಳಿತ ಘಟನೆ ನಡೆದಿದೆ.ನಾರಾಯಣಪುರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದೇ ರೈತರವಾತಂಕಕ್ಕೆ ಕಾರಣವಾಗಿದೆ. ಗೂಗಲ್ ಬ್ರಿಜ್ ಕಮ್ ಬ್ಯಾರೇಜ್ ತುಂಬಿದರು, ಎಲ್ಲಾ ಗೆಟ್ ತೆಗೆಯದ ಅಧಿಕಾರಿಗಳು ಅರ್ಧ ಭಾಗಕ್ಕೆ ಮಾತ್ರ ತರಗಿದಿದ್ದರು. ಇದರಿಂದ ಅಧಿಕಾರಿಗಳ ವಿರುದ್ಧ ಗ್ರಾಮದ ರೈತರ ಅಸಮಾಧಾನ ವ್ಯಕ್ತಪಡಿಸಿದರು.

ಗೇಟ್ ತೆಗೆಯದೆ ಇದ್ದರೆ ರೈತರ ಪಂಪ್ ಸೆಟ್‌ಗಳು ನೀರು ಪಾಲಾಗುವ ಆತಂಕ ರೈತರಲ್ಲಿ ಮನೆ ಮಾಡಿತ್ತು. ರಾತ್ರಿಯಿಡೀ ನಿದ್ದೆಗೆಟ್ಟು ಪಂಪ್ ಸೆಟ್‌ಗಳನ್ನು ತೆಗೆಯಲು ಮುಂದಾದರೂ ಕೆಲ ರೈತರ ಪಂಪ್‌ಸೆಟ್ ಗಳು ನೀರುಪಾಲಾಗಿವೆ. ಜೆಇ ಸೇರಿದಂತೆ ಅಧಿಕಾರಿಗಳಿಗೆ ಎಷ್ಟೇ ಕರೆ ಮಾಡಿದರು ಉತ್ತರಿಸುತ್ತಿಲ್ಲ, ಜನಪ್ರತಿನಿಧಿಗಳು ಕರೆ ಮಾಡಿದ್ರು ಸ್ಪಂದಿಸುತ್ತಿಲ್ಲ ಎಂಬುದು ರೈತರ ಅಸಮಧಾನ. ಎಲ್ಲಾ ಗೇಟ್ ಗಳನ್ನ ತೆಗೆಯುವಂತೆ ಒತ್ತಾಯಿಸಿ ರಾತ್ರಿ ಸೆತುವೆ ಮೇಲೆ ಕುಳಿತಿದ್ದ ರೈತರು.

WhatsApp Group Join Now
Telegram Group Join Now
Share This Article