K2kannadanews.in
Plastic awareness ರಾಯಚೂರು : ಪ್ಲಾಸ್ಟಿಕ್ ತ್ಯಜಿಸಿ, ಪ್ರಕೃತಿಯನ್ನು ಉಳಿಸಿ, ಪ್ಲಾಸ್ಟಿಕ್ ತ್ಯಜಿಸಿ ಕೈಚೀಲ ಬಳಸಿ ಎಂಬ ಘೋಷಣೆಯೊಂದಿಗೆ ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಪ್ಲಾಸ್ಟಿಕ್ ಜಾಗೃತ ಮೂಡಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ದ್ವಿತೀಯ ವರ್ಷದ ಚಾಳುಕ್ಯ ತಂಡದ NSS ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಿದರು, ಹಾಗೆಯೇ ಪ್ಲಾಸ್ಟಿಕ್ ಜಾಗೃತಿಗೆ ಸಂಬಂದಿಸಿದ ಹಲವಾರು ಚಿತ್ರಕಲೆಯ ಪೋಸ್ಟರ್ ಗಳನ್ನು ತಯಾರಿಸಿ, “ಪ್ಲಾಸ್ಟಿಕ್ ತ್ಯಜಿಸಿ, ಪ್ರಕೃತಿಯನ್ನು ಉಳಿಸಿ’.”ಪ್ಲಾಸ್ಟಿಕ್ ತ್ಯಜಿಸಿ,ಕೈಚೀಲ ಬಳಸಿ’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಜಲಚರ ಜೀವಿಗಳಿಗೆ ಪ್ರಾಣಿ ಪಕ್ಷಿಗಳಿಗೆ ಆಗುವಂತಹ ಸಮಸ್ಯೆಗಳನ್ನು ಹಾಗು ಮಾನವನ ಹಲವಾರು ರೋಗಗಳಿಗೆ ಪ್ಲಾಸ್ಟಿಕ್ ಕಾರಣವಾಗುತ್ತದೆಂದು ಜನರಲ್ಲಿ ಮನದಟ್ಟು ಮಾಡಿದರು.
ಪ್ಲಾಸ್ಟಿಕ್ ಚಿಲಗಳಲ್ಲಿ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜನರಿಗೆ ಪ್ಲಾಸ್ಟಿಕ್ ನ ಪರ್ಯಾಯವಾಗಿ ಪೇಪರ್ ಹಾಗು ಬಟ್ಟೆಯ ಕೈ ಚೀಲಗಳನ್ನು ವಿದ್ಯಾರ್ಥಿಗಳು ನೀಡಿ ಪ್ಲಾಸ್ಟಿಕ್ ನ ಹಾನಿಕಾರಕ ಅಂಶಗಳ ಬಗ್ಗೆ ವಿವರಿಸಿದರು, ವಿದ್ಯಾರ್ಥಿಗಳ ಈ ಜಾಗೃತಿಯಿಂದ ಮುಂದಿನ ದಿನಗಳಲ್ಲಿ ಬಟ್ಟೆ ಹಾಗೂ ಪೇಪರ್ ಚೀಲಗಳನ್ನಿ ಬಳಸಿ ಎಂದು ಜಾಗೃತಿ ಮೂಡಿಸಿದರು. ಈ ಜಾಗೃತ ಜಾತವು ಚಾಳುಕ್ಯ ತಂಡದ ನಾಯಕರಾದ ಹನುಮೇಶ, ಕಾವ್ಯ ಹೂಗರ್ ಹಾಗು ತಂಡದ ಎಲ್ಲ ಸದಸ್ಯರು ಹಾಗು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಡಾ ಸುಮಾ ಟಿ ಸಿ ಹಾಗು ಡಾ ವಿಶ್ವನಾಥ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.