6,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ ಫಿಲಿಪ್ಸ್ ಕಂಪನಿ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ದೊಡ್ಡ ಸಂಖ್ಯೆಯಲ್ಲಿ ದೋಷಪೂರಿತ ನಿದ್ರೆಯ ವೇಳೆ ಉಸಿರಾಟಕ್ಕೆ ಸಹಾಯ ಮಾಡುವ ಸಾಧನಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಹೊಸದಾಗಿ ನಷ್ಟಕ್ಕೆ ಗುರಿಯಾಗಿರುವ ಫಿಲಿಪ್ಸ್ 6,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿದೆ.
ಒಟ್ಟಾರೆ ಕಳೆದೊಂದು ವರ್ಷದಲ್ಲಿ 1.6 ಬಿಲಿಯನ್ ಯುರೋ ನಷ್ಟವಾಗಿರುವುದಾಗಿ ಕಂಪನಿ ಹೇಳಿದೆ. ದೋಷಪೂರಿತ ಸಾಧನಗಳನ್ನು ಹಿಂಪಡೆದಿದ್ದರಿಂದ ಹೆಚ್ಚಿನ ನಷ್ಟ ಉಂಟಾಗಿದೆ. ಹಾಗಾಗಿ ಪ್ರಸ್ತುತ ಅರ್ಧದಷ್ಟು ಉದ್ಯೋಗ ಕಡಿತವನ್ನ ಈ ವರ್ಷ ಮಾಡಲಾಗುವುದು. ಉಳಿದ ಅರ್ಧದಷ್ಟು ಉದ್ಯೋಗ ಕಡಿತ 2025ರ ವೇಳೆಗೆ ಸಾಕಾರಗೊಳ್ಳಲಿದೆ ಎಂದು ಕಂಪನಿ ಹೇಳಿದೆ. ಫಿಲಿಪ್ಸ್ ಹಲವಾರು ಗಮನಾರ್ಹ ಕಾರ್ಯಾಚರಣೆಯ ಸವಾಲುಗಳನ್ನ ಎದುರಿಸುತ್ತಿರುವುದರಿಂದ ಬಲವಾದ ಮಾರುಕಟ್ಟೆ ಸ್ಥಾನಗಳ ಸಂಪೂರ್ಣ ಸಾಮರ್ಥ್ಯವನ್ನ ಬಂಡವಾಳ ಮಾಡಿಕೊಳ್ಳುತ್ತಿಲ್ಲ ಎಂದು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯ್ ಜಾಕೋಬ್ ಹೇಳಿದ್ದಾರೆ.
![]() |
![]() |
![]() |
![]() |
![]() |