K2kannadanews.in
Liquor Bootle ಗುಂಟೂರು : ಕೆಲ ಕುಡುಕರು ಫ್ರೀಯಾಗಿ ಎಣ್ಣೆ ಸಿಗುತ್ತೆ ಅಂದ್ರೆ ಕೆಲಸ ಕಾರ್ಯ ಬಿಟ್ಟು ಬರ್ತಾರೆ. ಅಂತದ್ರಲ್ಲಿ ರಾಶಿ ರಾಶಿ ಬಾಟಲ್ ಮುಂದೆ ಇದೆ ಅಂದ್ರೆ ಏನಾಗ್ಬೇಡ ಹೇಳಿ. ಅಂತದ್ದೆ ಒಂದು ವಿಚಿತ್ರ ಘಟನೆ ಗುಂಟೂರಿನಲ್ಲಿ ನಡೆದಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಪೊಲೀಸರು ವಶಪಡಿಸಿಕೊಂಡ ಅಕ್ರಮ ಮದ್ಯದ ಬಾಟಲಿಗಳನ್ನು ಧ್ವಂಸ ಮಾಡುತ್ತಿದ್ದಾಗ, ಕುಡುಕರು ಅವುಗಳನ್ನು ಲೂಟಿ ಮಾಡಲು ಯತ್ನಿಸಿದ್ದಾರೆ. ಬಾಟಲಿಗಳನ್ನು ದೋಚಿಕೊಂಡು ಓಡಲು ಮದ್ಯಪ್ರಿಯರು ಮುಂದಾದಾಗ ಅವರನ್ನು ಪೊಲೀಸರು ನಿಯಂತ್ರಿಸುವಾಗ ಕೆಲ ಹೊತ್ತು ಪರಿಸ್ಥಿತಿ ಗೊಂದಲದ ಗೂಡಾಯಿತು.