K2kannadanews.in
Local News ರಾಯಚೂರು : ಮಾಜಿ ಸಚಿವ ಕೆ ಶಿವನಗೌಡ ನಾಯಕ ಅವರ ಹುಟ್ಟು ಹಬ್ಬದ ದಿನದಂದು ಹಾಕಿದ ನವಿಲುಗರಿಯ ಹಾರ ಒಂದು ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಾಜಿ ಸಚಿವ ಕೇಶವನ ಗೌಡ ನಾಯಕ್ ಅವರು ಇತ್ತೀಚಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಅವರ ಅಭಿಮಾನಿಗಳು ಅವರಿಗೆ ನವಿಲುಗರಿಯಿಂದ ತಯಾರಿಸಿದ ಬೃಹತ್ ಹಾರವನ್ನ ಹಾಕುವ ಮೂಲಕ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಆ ಒಂದು ಫೋಟೋ ಇದೀಗ ಮಾಜಿ ಸಚಿವರಿಗೆ ಸಂಕಷ್ಟ ತಂದೊಡ್ಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಆಧರಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ದೂರು ನೀಡಿದ್ದು. ಮಾದರಿಯಾಗಬೇಕಿದ್ದ ರಾಜಕಾರಣಿಗಳು ಇಂತಹ ಪ್ರೇರಣೆಯಾಗುವ ಕೆಟ್ಟ ಕೆಲಸಗಳು ಮಾಡಿದರೆ ಹೇಗೆ ಎಂದು ಪ್ರಶ್ನಿಸಿ ಕೂಡಲೇ ಇವರ ವಿರುದ್ಧ ದೂರು ದಾಖಲಿಸಿ ಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ಮಾಜಿ ಸಚಿವ ಕೆ ಶಿವನಗೌಡ ನಾಯಕ ಅವರು ಗಲಾಟೆಯಲ್ಲಿ ಎಡಬಟ್ಟಾಗಿದೆ ಯಾರು ಅಭಿಮಾನಿಗಳು ಹಾಕಿದ್ದಾರೆ ಕೂಡಲೇ ಆ ಒಂದು ನವಿಲುಗರಿಯ ಹಾರವನ್ನು ಅರಣ್ಯ ಇಲಾಖೆಗೆ ಒಪ್ಪಿಸುತ್ತೇನೆ. ನೋಟಿಸ್ ನೀಡಿದಲ್ಲಿ ಅದಕ್ಕೆ ಉತ್ತರಿಸುತ್ತೇನೆ. ಯಾವುದೇ ತನಿಖೆ ಮಾಡಿದರು ಅದಕ್ಕೆ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.