ಪೇಷಂಟ್ ಗಳು ಬಂದು ಲಬ್ ಲಬ್ ಹೊಯ್ಕೊಂಡ್ರು ಕೇಳೋರಿಲ್ಲ : ಶಾಸಕ ಅಸಮಧಾನ..

K 2 Kannada News
ಪೇಷಂಟ್ ಗಳು ಬಂದು ಲಬ್ ಲಬ್ ಹೊಯ್ಕೊಂಡ್ರು ಕೇಳೋರಿಲ್ಲ : ಶಾಸಕ ಅಸಮಧಾನ..
WhatsApp Group Join Now
Telegram Group Join Now

K2kannadanews.in

Political News ಯಾದಗಿರಿ : ಶಾಸಕ ಶರಣಗೌಡ ಕಂದಕೂರ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ನೋಡಿ. ಡಿ ಹೆಚ್‌ಓ, ವೈದ್ಯರು,‌ ಸಿಬ್ಬಂದಿಗಳ ವಿರುದ್ಧ ಕೆಂಡಮಂಡಲರಾಗಿ ತರಾಟೆಗೆ ತೆಗೆದುಕೊಂಡ ಘಟನೆ ಗುರುಮಠಲ್ ಕ್ಷೇತ್ರದಲ್ಲಿ ನಡೆದಿದೆ.

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಆಸ್ಪತ್ರೆಗೆ ಭೇಟಿನೀಡಿದ್ದರು. ಗುರುಮಠಕಲ್ ಕ್ಷೇತ್ರದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳು, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ, ಔಷಧಿಗಳ ಬಗ್ಗೆ ಶಾಸಕರು ಪರಿಶೀಲನೆ ಮಾಡಿದರು. ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರ, ಗಜರ್ಕೋಟೆ, ಕೋಟಗೇರಾ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಆಸ್ಪತ್ರೆ ಭೇಟಿಯ ಸಂದರ್ಭದಲ್ಲಿ ನಾಯಿಯ ಕೊಳಚೆಯಿಂದ ಬರುವ ರೋಗಗಳ ವಿರುದ್ಧದ ಔಷಧಿಗಳು ಮತ್ತು ಫ್ಲೂಯಿಡ್‌ಗಳನ್ನು ಸರ್ಕಾರ ಸರಬರಾಜು ಮಾಡುತ್ತಿಲ್ಲ ಎಂಬುದು ಬಯಲಾಗಿದೆ.‌ ನಾಯಿಕಡಿತ, ರೇಬೀಸ್ ಲಸಿಕೆ ಮತ್ತು IV ಫ್ಲೂಯ್ಡ್ ಖಾಸಗಿ ಮೆಡಿಕಲ್‌ಗಳಿಂದ ಖರೀದಿ ಮಾಡಲಾಗುತ್ತಿದೆ ಎಂಬ ಸತ್ಯ ತಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಸಾಕಷ್ಟು ಔಷಧಿಗಳ ಸರಬರಾಜು ಇಲ್ಲದಿರುವ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಶಾಸಕ ಶರಣಗೌಡ ಕಂದಕೂರು ತಕ್ಷಣವೇ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ಕರೆ ಮಾಡಿ ಔಷಧಿ ಮತ್ತು ಸಿಬ್ಬಂದಿಗಳ ಕೊರತೆ ಬಗ್ಗೆ ಗಮನ ಸೆಳೆದರು. ಸಮಸ್ಯೆ ಪರಿಹರಿಸಲು ದೂರವಾಣಿ ಮೂಲಕ ಸೂಚನೆ ನೀಡಲಾಯಿತು. ಅದೇ ರೀತಿ ರಕ್ತಹೀನತೆಯಿಂದ ಬಳಲುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಶಾಸಕರು ಆತಂಕ ವ್ಯಕ್ತಪಡಿಸಿದರು. ಗುರುಮಠಕಲ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಶಾಸಕರ ಸೂಕ್ತ ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆಗೆ ಮಾನವೀಯತೆಯ ಮೌಲ್ಯ ಮೊದಲನೆಯದಾಗಿ ಇರಬೇಕು ವಿನಮ್ರತೆಗೆ ಪ್ರಾಧಾನ್ಯ ನೀಡಿ ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಿ ಎಂದರು.

 

WhatsApp Group Join Now
Telegram Group Join Now
Share This Article