K2kannadanews.in
Local news ರಾಯಚೂರು : ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಬಸ್ಸಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ರಾಯಚೂರು ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಾಮಾನ್ಯವಾಗಿ ಹೋಗಿದೆ. ಈ ಬಗ್ಗೆ ನಿಲ್ದಾಣದ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ದೂರಾಗಿದೆ.
ಹೌದು ರಾಯಚೂರು ನಗರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸಂಜೆ 3 ಗಂಟೆಯಿಂದ 6 ಗಂಟೆಯವರೆಗೆ ರಾಯಚೂರಿನಿಂದ ಲಿಂಗಸುಗೂರು ಮತ್ತು ಸಿಂಧನೂರು ಮಾರ್ಗಕ್ಕೆ ಬಸ್ಸುಗಳ ಇಲ್ಲದೆ, ಸಾವಿರಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 6 ಗಂಟೆಯ ವೇಳೆಗೆ ಆಗೊಂದು ಹೀಗೊಂದು ಬರುವ ಬಸ್ಸಿಗೆ ಪ್ರಯಾಣಿಕರು ಸೀಟು ಹಾಕಲು ಉಂಟಾಗುತ್ತಿದೆ.
ಇನ್ನು ಹಲವು ಬಾರಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಇರುವಂತಹ ಅಧಿಕಾರಿಗಳೊಂದಿಗೆ ಜಗಳವಾಡಿದರು ಕೂಡ ಯಾವುದೇ ಪ್ರಯೋಜನೆ ಆಗಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪ್ರಯಾಣಿಕರು ಇಲ್ಲದಿದ್ದರೂ ಕೂಡ ಕಾಲಿ ಬಸ್ಸುಗಳು ಒಂದರಿಂದ ಒಂದು ಹೋಗುತ್ತವೆ. ಪ್ರಯಾಣಿಕರು ಓಡಾಡುವ ಸಂದರ್ಭದಲ್ಲಿ ಯಾವುದೇ ಬಸ್ ಗಳು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಹಿತ ಗಮನಹರಿಸಿ ಬಸ್ ಗಳ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ.