K2kannadanews.in
frog in Chips packet : ಇತ್ತೀಚಿಗೆ ಮಕ್ಕಳಿಗೆ (Childrens) ಮನೆಯ ತಿಂಡಿ ತಿನಿಸುಗಳಿಗಿಂತ (Snack’s), ಅಂಗಡಿಯಲ್ಲಿ (Shop) ಸಿಗುವ ತಿಂಡಿ ತಿನಿಸುಗಳ ಮೇಲೆ ಹೆಚ್ಚು ಪ್ರೀತಿ (Love). ಅದರಲ್ಲೂ ಮಕ್ಕಳು ಹೆಚ್ಚಾಗಿ ತಿನ್ನುವುದು ಚಿಪ್ಸ್ (Chips). ಆದರೆ ಅಂತಹ ಚಿಪ್ಸ್ ಕೊಡಿಸುವ ಮುನ್ನ ಪಾಲಕರು (parents) ಎಚ್ಚರಿಕೆ (Beware) ವಹಿಸುವುದು ಅಗತ್ಯವಾಗಿದೆ. ಯಾಕಂದ್ರೆ ಅದರಲ್ಲಿ ಸತ್ತ ಹುಳುಗಳು, ಕಪ್ಪೆಗಳು ಸಿಗಬಹುದು. ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಗುಜರಾತ್‌ನ (Gujrat) ಜಾಮ್‌ನಗರದಲ್ಲಿ ಬಾಲಾಜಿ ಎಂಬ ಕಂಪನಿಯ ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ಕಪ್ಪೆ ಪತ್ತೆಯಾದ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಕಂಡು ವೀಡಿಯೋ ಕೂಡ ಮಾಡಿದ್ದಾರೆ. ನಂತರ ಈ ಬಗ್ಗೆ ವ್ಯಕ್ತಿಯೊಬ್ಬರು ಅಲ್ಲಿನ ನಗರಸಭೆ ಆಹಾರ ಶಾಖೆಗೆ ದೂರು ನೀಡಿದ್ದರು ಎನ್ನಲಾಗುತ್ತಿದೆ. ದೂರಿನ ಮೇರೆಗೆ ಆಹಾರ ಶಾಖೆಯ ಅಧಿಕಾರಿಗಳು ಚಿಪ್ಸ್ ತಯಾರಿಸಿದ ವ್ಯಕ್ತಿಯ ಮನೆಗೆ ತಲುಪಿ ಚಿಪ್ಸ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ಸತ್ಯಾ ಸತ್ಯತೆ ಏನೇ ಇರಲಿ, ನಾವು ನಮ್ಮ ಮಕ್ಕಳಿಗೆ ಹೊರಗಡೆ ತಿಂಡಿ ತಿನಿಸುಗಳಿಗಿಂತ, ಮನೆಯಲ್ಲಿನ ತಿಂಡಿ ತಿನಿಸುಗಳಿಗೆ ಅಭ್ಯಾಸ ಮಾಡಿಸಿದರೆ ಇಂತಹ ಒಂದು ಭಯದಿಂದ ಮುಕ್ತರಾಗಬಹುದು ಮತ್ತು ಮಕ್ಕಳ ಆರೋಗ್ಯದ ಸ್ಥಿರತೆ ಕಾಣಬಹುದು.