K2KANNADANEWS.IN
INDOPAK ರಾಯಚೂರು : ಪಾಕಿಸ್ತಾನ ಪ್ರಧಾನಿ ಮತ್ತು ಬಾವುಟಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಹಿಂದೂ ಮುಸ್ಲಿಂ ಯುವಕರ ಬಳಗದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕಾಶ್ಮೀರದ ಪೆಹಲ್ಗಾಮ್ ದಾಳಿ ನಂತರ ಭಾರತೀಯ ಸೇನೆ ಮಾಡುತ್ತಿರುವ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಭಾರತೀಯ ಸೈನಿಕರು ಉಗ್ರ ನೆಲೆಗಳ ಮೇಲೆ ದಾಳಿಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ಈ ವೇಳೆ ನರಿ ಬುದ್ಧಿ ತೋರಿಸುತ್ತಿರುವ ಪಾಕಿಸ್ತಾನ ಮತ್ತು ಸೈನಿಕರ ವಿರುದ್ಧ ಅಸಮಾಧಾನ ಹೊರಹಾಕಲಾಯಿತು ಮತ್ತು ಪಾಕಿಸ್ತಾನ ಪ್ರಧಾನಿ ಮತ್ತು ಪಾಕಿಸ್ತಾನದ ಭಾವುಟಕ್ಕೆ ವೃತ್ತದಲ್ಲಿ ಪೆಟ್ರೋಲ್ಸರಿದು ಬೆಂಕಿ ಹಚ್ಚುವ ಮೂಲಕ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಲಾಯಿತು.
ಭಾರತದಲ್ಲಿ ರಾಮ್ ರಹೀಮ್ ರನ್ನು ಬೇರೆ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಕೆಲ ತಾಲಿಬಾನ್ ಮುಖವಾಡ ಹಾಕಿದ ಜನರಿದ್ದಾರೆ. ದೇಶಕ್ಕಾಗಿ ನಾವೆಲ್ಲರೂ ರಕ್ತ ಕೊಡಲು ಸಿದ್ಧ ಎಂದ ಮುಸ್ಲಿಂ ಯುವಕರು ಹೇಳಿದರು. ಭಾರತೀಯ ಸೈನಿಕರ ಹೊಂರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.