
K2 ಪೊಲಿಟಿಕಲ್ ನ್ಯೂಸ್ : ಭಾರತೀಯ ಜನತಾ ಪಕ್ಷದ ಸರ್ಕಾರ ಏನು ಕೊಡುಗೆ ನೀಡಿದೆ ಎಂದು ನಮ್ಮ ಕೆಲಸಗಳೇ ಸಾಕ್ಷಿ ಹೇಳುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನೀರಾವರಿ ಯೋಜನೆಗಳು :
ಸರ್ವಜ್ಞ ಏತ ನೀರಾವರಿ ಯೋಜನೆಯಡಿ 184 ಕೋಟಿ ರೂ.ಗಳ ವೆಚ್ಚದಲ್ಲಿ 93 ಕೆರೆಗಳನ್ನು ತುಂಬಿಸಲಾಗಿದೆ. ಹಾನಗಲ್ ತಾಲ್ಲೂಕಿನಲ್ಲಿ ಬಾಳಂದೂರು ಏತ ನೀರಾವರಿ ಯೋಜನೆಗೆ 388 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿದ್ದೇವೆ. ಹಾನಗಲ್ ತಾಲ್ಲೂಕಿನಲ್ಲಿ. 160 ಕೋಟಿ ರೂ.ಗಳ ಯೋಜನೆ ಬ್ಯಾಡಗಿ ತಾಲ್ಲೂಕಿನಲ್ಲಿ ಏತನೀರಾವರಿ ಯೋಜನೆಗೆ 157 ಕೋಟಿ ರೂ.ಗಳು, ಆನೂರು ಏತನೀರಾವರಿಗೆ 112 ಕೋಟಿ ರೂ.ಗಳು. ಮುಂದಿನ ತಿಂಗಳು ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಣೆಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಏತ ನೀರಾವರಿ 140 ಕೋಟಿ ರೂ.ಗಳ ವೆಚ್ಛದಲ್ಲಿ ಕೈಗೊಂಡು ಇಲ್ಲಿ ಅಭಿವೃದ್ಧಿಯ ಪರ್ವ ನಮ್ಮ ಕಾಲದಲ್ಲಿ ಆಗಿದೆ. ತುಂಗಾ ಮೇಲ್ದಂಡೆಯಿಂದ 8 ಏತ ನೀರಾವರಿ ಯೋಜನೆಗಳನ್ನು ನಮ್ಮ ಕಾಲದಲ್ಲಿ ಅನುಮೋದಿಸಿ, ನಮ್ಮ ಕಾಲದಲ್ಲಿಯೇ ಉದ್ಘಾಟಿಸುತ್ತಿದ್ದೇವೆ. ಇದೊಂದು ದಾಖಲೆ ಎಂದರು.
ದುಡಿಯುವ ವರ್ಗಕ್ಕೆ ಬೆಲೆ : ರೈತ ಮಕ್ಕಳಿಗೆ ರೈತ ವಿದ್ಯಾ ನಿಧಿ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ರೂಪಿಸಲಾಗಿದೆ. ಈ ವರ್ಷ 11 ಲಕ್ಷ ಮಕ್ಕಳಿಗೆ 483 ಕೋಟಿ ರೂ.ಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ. 6 ಲಕ್ಷ ರೈತ ಕೂಲಿಕಾರರ ಮಕ್ಕಳು, ಮೀನುಗಾರ, ನೇಕಾರರ ಮಕ್ಕಳಿಗೆ ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಸಹಾಯ ನೀಡಲಾಗಿದೆ. ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ. ಗಳ ಕಾಯಕ ಯೋಜನೆ, ಸ್ತ್ರೀ ಸಾಮಥ್ರ್ಯ ಯೋಜನೆ, ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ರೂಪಿಸಿದೆ. ದುಡಿಯುವ ವರ್ಗಕ್ಕೆ ಬೆಲೆ ನೀಡುವ ಕೆಲಸವಾಗುತ್ತಿದೆ ಎಂದರು.
![]() |
![]() |
![]() |
![]() |
![]() |
[ays_poll id=3]