![]() |
![]() |
![]() |
![]() |
![]() |
ರಾಯಚೂರು : ಏಕೈಕ ಈರುಳ್ಳಿ ಖರೀದಿಯನ್ನು ನಿಲ್ಲಿಸಿದ ಎಪಿಎಂಸಿ ಖರೀದಿದಾರರ ವಿರುದ್ಧ ರೈತರು ಎಪಿಎಂಸಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಹೌದು ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆ ಈರುಳ್ಳಿಯನ್ನು ಮಾರಾಟಕ್ಕೆ ತೆಗೆದುಕೊಂಡು ಬಂದರೆ ಖರೀದಾರರು ಈರುಳ್ಳಿಯನ್ನು ಖರೀದಿಸದೆ ವಾಪಸ್ ತೆಗೆದುಕೊಂಡು ಹೋಗಲು ರೈತರಿಗೆ ಹೇಳಿದ್ದು, ಖರೀದಿದಾರರು ಈರುಳ್ಳಿ ಬಿಟ್ಟು ಬೇರೆ ಎಲ್ಲಾ ಬೆಳೆಗಳನ್ನು ಖರೀದಿ ಮಾಡುತ್ತಿದ್ದಾರೆ.
ರೈತರು ಯಾದಗಿರಿ, ಲಿಂಗಸುಗೂರು ,ಆದೋನಿ, ಕರ್ನೂಲು ಹಾಗೂ ಇನ್ನಿತರ ಸ್ಥಳಗಳಿಂದ ಮಾರಾಟಕ್ಕಾಗಿ ಈರುಳ್ಳಿ ತಂದಿದ್ದಾರೆ. ನಂತರ ರೈತ ಮುಖಂಡರಾದ ಲಕ್ಷ್ಮಣಗೌಡ ಕಡಗಂದೊಡ್ಡಿ ನೇತೃತ್ವದಲ್ಲಿ ಎಪಿಎಂಸಿ ಕಾರ್ಯದರ್ಶಿಯನ್ನು ಹಾಗೂ ಎಪಿಎಂಸಿ ನಿರ್ದೇಶಕರನ್ನು ಭೇಟಿ ಮಾಡಿ ಸಾಗಣೆ ದರವನ್ನು ಕೊಡುವಂತೆ ರೈತರು ಒತ್ತಾಯಿಸಿದರು. ಅದಕ್ಕೆ ಎಪಿಎಂಸಿ ಸಮ್ಮತಿ ನೀಡಿ ರೈತರಿಗೆ ಎಪಿಎಂಸಿ ಯವರೇ ಖರೀದಿ ಮಾಡುವುದಾಗಿ ಭರವಸೆ ನೀಡಿದರು .
![]() |
![]() |
![]() |
![]() |
![]() |
[ays_poll id=3]