This is the title of the web page
This is the title of the web page
Health & Fitness

ಪೌಷ್ಟಿಕ ಸತ್ವಗಳ ಖನಿಜ ಮೊಟ್ಟೆ…!


K2 ಹೆಲ್ತ್ ನ್ಯೂಸ್ : ದಿನಕ್ಕೊಂದು ಮೊಟ್ಟೆ ತಿಂದರೆ ವೈದ್ಯರಿಂದ ದೂರವಿಡಬಹುದು. ಅದೇ ರೀತಿಯಾಗಿ ನೀವು ಎರಡು ಮೊಟ್ಟೆ ತಿಂದರೂ ಅದರಿಂದ ಯಾವುದೇ ಹಾನಿ ಆಗದು. ಇಂಟರ್ನೆಟ್ ನಲ್ಲಿ ಸಿಕ್ಕಿರುವ ಮಾಹಿತಿ ಪಡೆದುಕೊಂಡು ಮೊಟ್ಟೆಯಲ್ಲಿ ಪೋಷಕಾಂಶಗಳ ಬಗ್ಗೆ ವಿವಿಧ ರೀತಿಯ ವಾದಗಳು ಇರಬಹುದು.

ಮೊಟ್ಟೆಯು ಕೊಬ್ಬನ್ನು ಹೊಂದಿದೆ ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಕೂಡ ಇದೆ ಎಂದು ಹೆಚ್ಚಿನವರು ಭಾಗಿಸುವರು. ಆದರೆ ಮೊಟ್ಟೆಯಲ್ಲಿ ಇರುವಂತಹ ಕೊಬ್ಬು ಮತ್ತು

ಕೊಲೆಸ್ಟ್ರಾಲ್ ಕೇವಲ ಕೊಲೆಸ್ಟ್ರಾಲ್ ಗೆ ಸೂಕ್ಷ್ಮವಾಗಿ ಇರುವಂತಹ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮಾತ್ರ ಹಾನಿಕರ. ಮೊಟ್ಟೆಯು ವಿಶ್ವದಲ್ಲಿ ಅತೀ ಪೋಷಕಾಂಶಗಳು ಇರುವ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆಯಲ್ಲಿ ದಿನಕ್ಕೆ ಬೇಕಾಗಿರು ವಂತಹ ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿನ ಕೆಲವು ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು.ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್ ಮಾಡಿ, ತಿಂದರೂ ಅದರಲ್ಲಿ ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು.

ಹೃದಯದಆರೋಗ್ಯಕ್ಕೂಒಳ್ಳೆಯದು

ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್‌ ಇರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಾವನೆ ಇದೆ. ಆದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ. ಅದು ಮೊಟ್ಟೆಯಲ್ಲಿದೆ.

ಕಣ್ಣುಗಳ ದೃಷ್ಟಿ ದೋಷ

ಕಣ್ಣುಗಳ ದೃಷ್ಟಿ ದೋಷದ ಪರಿಹಾರಕ್ಕೆ ಕೋಳಿ ಮೊಟ್ಟೆಯಲ್ಲಿದೆ ಮದ್ದ- ಇದಕ್ಕೆ ಕಾರಣ ಕೋಳಿ ಮೊಟ್ಟೆಯಲ್ಲಿರುವ ಲ್ಯೂಟೀನ್ ಮತ್ತು ಜಿಯಾಗ್ಸಾಂಥಿನ್ ಎಂಬ ಎರಡು ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಗಳು.ಈ ಆಂಟಿ – ಆಕ್ಸಿಡೆಂಟ್ ಗಳು ನಿಮ್ಮ ಕಣ್ಣಿನ ರೆಟಿನಾದ ಮೇಲೆ ತಮ್ಮ ಪ್ರಭಾವ ಬೀರುತ್ತವೆ.ಅಂದರೆ ಬಹುತೇಕ ಮಂದಿ ಎದುರಿಸುವ ಕಣ್ಣಿನ ಸಮಸ್ಯೆಗಳಾದ ಕಣ್ಣಿನ ಪೊರೆ ಮತ್ತು ಮಕ್ಯುಲರ್ ಡಿಜನರೇಶನ್ ಸಮಸ್ಯೆಗಳನ್ನು ಈ ಎರಡು ಅಂಶಗಳು ಸುಲಭವಾಗಿ ನಿವಾರಿಸುತ್ತವೆ.ಜೊತೆಗೆ ಕೋಳಿ ಮೊಟ್ಟೆಯಲ್ಲಿ ವಿಟಮಿನ್ ‘ ಎ ‘ ಅಂಶ ಹೆಚ್ಚಾಗಿದ್ದು, ಇದು ವಯಸ್ಸಾದಂತೆ ಕಾಡುವ ಕಣ್ಣಿನ ಕುರುಡುತನ ಸಮಸ್ಯೆಯನ್ನು ಹತ್ತಿರ ಕೂಡ ಸುಳಿಯದಂತೆ ನೋಡಿಕೊಳ್ಳುತ್ತದೆ.

ಮೊಟ್ಟೆ ಪೌಷ್ಟಿಕ ಸತ್ವಗಳ ಖನಿಜ

ನಾವು ಸೇವಿಸುವ ಆಹಾರಗಳಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದರೆ ಅದು ನಮ್ಮ ದೇಹದ ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಯಾವುದೇ ಆಹಾರ ಸೇವನೆ ಮಾಡಿದರೂ ಮೊದಲು ಅದರಲ್ಲಿರುವ ಪೌಷ್ಟಿಕ ಸತ್ವಗಳ ಮತ್ತು ಖನಿಜಾಂಶಗಳ ಕಡೆಗೆ ನಮ್ಮ ಗಮನ ಕೊಡಬೇಕು.ಮೊಟ್ಟೆಯ ಪ್ರಸ್ತಾಪದಲ್ಲೂ ಅಷ್ಟೇ. ನೋಡಲು ಚಿಕ್ಕದಿದ್ದರೂ ಮೊಟ್ಟೆಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಸಮತೋಲನ ಆಹಾರ ಪದ್ಧತಿಯಲ್ಲಿ ಮೊಟ್ಟೆಗಳಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ.

ಮೊಟ್ಟೆಗಳಿಂದ ಸಿಗಲಿದೆ ಸಾಕಷ್ಟು ಪ್ರೋಟಿನ್ ಅಂಶಗಳು

ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ನಾವು ಸೇವಿಸುವ ಆಹಾರದಲ್ಲಿ ಪ್ರೊಟೀನ್ ಅಂಶಗಳು ಹೆಚ್ಚಿರಬೇಕು. ಮೊಟ್ಟೆಗಳ ವಿಷಯಕ್ಕೆ ಬಂದರೆ ಒಂದು ಸಾಧಾರಣ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಗಳಷ್ಟು ಪ್ರೋಟೀನ್ ಅಂಶ ಸೇರಿದೆ ಜೊತೆಗೆ ಸಾಕಷ್ಟು ಅಮೈನೋ ಆಮ್ಲಗಳ ಅಂಶ ಕೂಡ ಸೇರಿದೆ.ಪ್ರತಿ ದಿನ ಇಷ್ಟು ಮಟ್ಟದ ಪ್ರೋಟಿನ್ ಅಂಶಗಳನ್ನು ನಮ್ಮ ದೇಹಕ್ಕೆ ಸೇರಿಸುತ್ತಾ ಹೋದರೆ ನಮ್ಮ ಮಾಂಸ ಖಂಡಗಳು ಚೆನ್ನಾಗಿ ರೂಪುಗೊಂಡು, ರಕ್ತದ ಒತ್ತಡ ಕಡಿಮೆಯಾಗಿ, ಮೂಳೆಗಳ ಆರೋಗ್ಯ ಉತ್ತಮಗೊಂಡು ತೂಕ ನಿರ್ವಹಣೆಯಲ್ಲಿ ಸಹಾಯಕವಾಗುತ್ತದೆ.

ಮೊಟ್ಟೆ ತುಂಬಿಸುತ್ತದೆ ನಿಮ್ಮ ಹೊಟ್ಟೆ

ಬೆಳಗಿನ ಉಪಹಾರದಲ್ಲಿ ಮೊಟ್ಟೆಯ ಸೇವನೆಯಿಂದ ನಿಮಗೆ ದೀರ್ಘ ಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಮೊಟ್ಟೆಯಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಇರುವುದು.ನೀವು ನಿಮ್ಮ ಉಪಹಾರಕ್ಕೆ ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಚಿಕ್ಕ ಚಿಕ್ಕ ಆಹಾರಗಳ ನಡುವೆ ನಿಮಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ.ಆಗಾಗ ಆಹಾರ ಸೇವನೆ ಮಾಡಬೇಕು ಎಂಬ ಭಾವನೆ ಉಂಟಾಗುವುದಿಲ್ಲ ಮತ್ತು ರಸ್ತೆ ಬದಿಯ ಆಹಾರಗಳನ್ನು ತಿನ್ನಬೇಕೆಂಬ ಚಪಲ ಕೂಡ ಕಡಿಮೆ ಆಗುತ್ತದೆ.


[ays_poll id=3]