Ad imageAd image

ಗಮನಿಸಿ ಇಂದು ವೈದ್ಯರ ಮುಷ್ಕರ : ಡಾಕ್ಟರ್ಸ್ ಇಂದು ಸಿಗುವುದಿಲ್ಲ..!

K 2 Kannada News
ಗಮನಿಸಿ ಇಂದು ವೈದ್ಯರ ಮುಷ್ಕರ : ಡಾಕ್ಟರ್ಸ್ ಇಂದು ಸಿಗುವುದಿಲ್ಲ..!
WhatsApp Group Join Now
Telegram Group Join Now

K2kannadanews.in

doctor’s strike ರಾಯಚೂರು : ಕೋಲ್ಕತ್ತ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ರಾಯಚೂರು ನಗರದಲ್ಲೂ ಕೂಡ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ.

ದೇಶಾದ್ಯಂತ ವೈದ್ಯರು ಸಾಮೂಹಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಒಂದು ಪ್ರತಿಭಟನೆಗೆ ಬೆಂಬಲಿಸಿ ರಾಷ್ಟ್ರ ವ್ಯಾಪಿ ವೈದ್ಯರು ಪ್ರತಿಭಟನೆ ಮತ್ತು ಒಪಿಡಿ ಸೇವೆಗಳನ್ನು ಮುಚ್ಚುವಂತೆ ಕರೆ ನೀಡಿದ್ದಾರೆ. ಈ ಹಿನ್ನಲೆ ರಾಯಚೂರು ಜಿಲ್ಲೆಯಾದ್ಯಂತ ವೈದ್ಯರು ಖಾಸಗಿ ಆಸ್ಪತ್ರೆ ಮತ್ತು ಕ್ಲೀನಿಕ್ ಗಳನ್ನು ಮುಚ್ಚಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ದೇಶಾದ್ಯಂತ ಆರೋಗ್ಯ ಸೇವೆಗಳನ್ನು 24 ಗಂಟೆಗಳ ಕಾಲ ಮುಚ್ಚಲಾಗುವುದು.

 

WhatsApp Group Join Now
Telegram Group Join Now
Share This Article