ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ : ಮಳೆ ಹಿನ್ನೆಲೆ ಮಂದಗತಿಯ ಮತದಾನ..

K 2 Kannada News
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ : ಮಳೆ ಹಿನ್ನೆಲೆ ಮಂದಗತಿಯ ಮತದಾನ..
Oplus_0
WhatsApp Group Join Now
Telegram Group Join Now

K2kannadanews.in

MLC election ರಾಯಚೂರು : ಈಶಾನ್ಯ ಪದವೀಧರ ಕ್ಷೇತ್ರದ ಮತದಾನ ಆರಂಭವಾಗಿದ್ದು, ಜಿಟಿಜಿಟಿ ಮಳೆಯಲ್ಲಿಯೇ ಮತಗಟ್ಟೆಗೆ ‌ಬಂದು ಮತದಾನ ಮಾಡುತ್ತಿರುವ ಮತದಾರರು. ಪವರ್ ಇಲ್ಲದೆ ಮೊಬೈಲ್ ‌ಟಾರ್ಚ್ ಬಳಕೆ ಮಾಡಿ ಸಿಬ್ಬಂದಿ ಮತದಾನಕ್ಕೆ ವ್ಯವಸ್ಥೆ ಮಾಡಿರುವ ಪ್ರಸಂಗ ನಡೆದಿದೆ.

ಹೌದು ರಾಯಚೂರು ಜಿಲ್ಲೆಯಾದ್ಯಂತ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ಜಿಟಿಜಿಟಿ ಮಳೆಯಲ್ಲಿಯೇ ಮತಗಟ್ಟೆಗೆ ‌ಬಂದು ಮತದಾನ ಮಾಡುತ್ತಿರುವ ಪದವೀಧರ ಮತದಾರರು.‌ ರಾಯಚೂರು ‌ನಗರದ ಮತಗಟ್ಟೆ ನಂ.84ರಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತದಾನ. ಮಳೆ ಹಿನ್ನೆಲೆ ಪವರ್ ಇಲ್ಲದೆ ಮೊಬೈಲ್ ‌ಟಾರ್ಚ್ ಬಳಕೆ ಮಾಡಿ ಸಿಬ್ಬಂದಿ ಮತದಾನಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ.

ಇನ್ನೂ ರಾಯಚೂರು ಜಿಲ್ಲೆಯಾದ್ಯಂತ 30 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಸಿಂಧನೂರಿನಲ್ಲಿ ಒಂದು ಆಕ್ಜಿಲರಿ ಹೆಚ್ಚುವರಿ ಮತಗಟ್ಟೆ ಮಾಡಲಾಗಿದೆ. 30 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗುತ್ತಿದೆ. 7 ಮತಗಟ್ಟೆಗಳಲ್ಲಿ ವಿಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 20,317 ಮತದಾರರು ನೋಂದಣಿಯಾಗಿದ್ದು, 13,581 ಪುರುಷರು, 6,731 ಮಹಿಳೆಯರು, 5 ಇತರೆ ಮತದಾರರು ಇದ್ದಾರೆ. ಮತದಾನಕ್ಕಾಗಿ 41ಪಿಆರ್ ಒ, 41 ಎಆರ್ ಒ ಹಾಗೂ 82 ಪಿಒ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

WhatsApp Group Join Now
Telegram Group Join Now
Share This Article