This is the title of the web page
This is the title of the web page
Politics News

ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ : ಸಿಎಂ


K2 ಪೊಲಿಟಿಕಲ್ ನ್ಯೂಸ್ : ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜೆಡಿಎಸ್ ಪಕ್ಷ ತನ್ನ ಆಟ ಆಡಲು ಅವಕಾಶ ನೀಡಬಾರದು ಎನ್ನುವುದು ನಮ್ಮ ಉದ್ದೇಶ.‌ ಸ್ಪಷ್ಟ ಬಹುಮತ‌ಬರುವ ವಿಶ್ವಾಸ ನಮಗಿದೆ. 2023 ಚುನಾವಣೆಯಲ್ಲಿ 130 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.

ಬಹುಮತಕ್ಕೆ ಹತ್ತಿರ ಬಂದಿದ್ದೇವೆ :2004 ರಿಂದ ಬಿಜೆಪಿ ನಿರಂತರ ಬೆಳವಣಿಗೆಯಾಗುತ್ತ ಬಂದಿದೆ.
ನಾವು ಸ್ಪಷ್ಟ ಬಹುಮತ ಪಡೆದಿಲ್ಲ. ಆದರೆ ಬಹುಮತಕ್ಕೆ ಹತ್ತಿರ ಬಂದಿದ್ದೇವೆ. ಬಿಜೆಪಿ ಸಾಮಾಜಿಕ ಕಳಕಳಿ ಇರುವ ಪಕ್ಷ. ಚುನಾವಣೆ ಆಟದಲ್ಲಿ ಸೋಲದೇ ಇರಲು ಆಡುವುದು, ಗೆಲ್ಲಬೇಕೆಂದು ಆಡುವುದು. ನಾನು ಗೆಲ್ಲುವುದಕ್ಕಾಗಿ ಆದುವುದರಲ್ಲಿ ನಂಬಿಕೆ‌ ಇಟ್ಟವನು.‌
ಜನರು ಎಷ್ಟೇ ಬಡವರಿರಬಹುದು ಅವರಿಗೆ ಅಗತ್ಯಕ್ಕೆ ಪೂರಕವಾಗಿ ಸಹಕಾರ ನೀಡಬೇಕು. ಆದರೆ, ಎಲ್ಲವನ್ನು ಉಚಿತವಾಗಿ ನೀಡುತ್ತೇನೆ ಎನ್ನುವುದನ್ನು ಕರ್ನಾಟಕದ ಸ್ವಾಭಿಮಾನಿ ಜನರು ನಂಬುವುದಿಲ್ಲ ಎಂದರು.

ಕಾಂಗ್ರೆಸ್ ವಿರುದ್ಧ 60 ಪ್ರಕರಣ : ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಮಿಸಲಾತಿ ನೀಡುವ ವಿಚಾರ ನ್ಯಾಯಾಲಯದಲ್ಲಿದೆ.‌ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಆದರೆ, ರಾಜ್ಯದಲ್ಲಿ ಒಕ್ಕಲಿಗ ಹಾಗೂ ಸಮುದಾಯಕ್ಕೆ ಪ್ರತ್ಯೇಕ‌ ಪ್ರವರ್ಗದಲ್ಲಿ ಅವಕಾಶ ನೀಡುವ ಮೂಲಕ ಆ ಸಮುದಾಯಗಳಲ್ಲಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಪ್ರಯತ್ನ ನಮ್ಮದು. ಲಿಂಗಾಯತ ಸಮುದಾಯ ಅತ್ಯಂತ ಪ್ರಬುದ್ಧರಿದ್ದಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಮೀಸಲಾತಿ ಪರಿಷ್ಕರಣೆ ಆಗಬೇಕೆಂಬ ನಿಯಮ ಇದೆ. ಅದನ್ನು ಯಾರೂ ಮಾಡಿರಲಿಲ್ಲ.‌ ನಾವು ಮಾಡುತ್ತಿದ್ದೇವೆ.

40% ಕಮಿಷನ್ ಬಗ್ಗೆ ಮಾತನಾಡುವ ಕಾಂಗ್ರೆಸ್ ನವರು ಒಂದೇ ಒಂದು ದಾಖಲೆ ಸಮೇತ ಮಾಹಿತಿ ನೀಡಲಿಲ್ಲ. ಅವರ ಪರವಾಗಿ ವಾದ ಮಾಡುವ ಗುತ್ತಿಗೆದಾರರ ಸಂಘದವರು ದಾಖಲೆ ನೀಡಲಿಲ್ಲ. ಅವರ ವಿರುದ್ದ ನಮ್ಮ ಸಚಿವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕಾಂಗ್ರೆಸ್ ಲೋಕಾಯುಕ್ತ ಸಂಸ್ಥೆ ಯನ್ನು ಮುಚ್ಚಿ ಹಾಕಿದವರು. ಅವರ ಸರ್ಕಾರದ ವಿರುದ್ದ 60 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದರು. ನಮ್ಮದು ಬೆಳೆಯುತ್ತಿರುವ ಪಕ್ಷ ನಾವು ಅವಕಾಶ ಬಯಸಿದವರಿಗೆ ಅವಕಾಶ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಭಾರತ್ ಜೋಡೊ: ಕಾಂಗ್ರೆಸ್ ಗೆ ರಾಜಕೀಯ ಲಾಭವಿಲ್ಲ, ಸಿದ್ದರಾಮಯ್ಯ ಅವರ ಆರೋಪಕ್ಕೆ ಪರಮೇಶ್ವರ ಉತ್ತರ ಕೊಡಬೇಕು. ಅವರ ಅವಧಿಯಲ್ಲಿ ಪರಮೇಶ್ವರ್ ಹಾಗೂ ಖರ್ಗೆ ಅವರಿಗೆ ಯಾವ ರೀತಿಯ ಅನ್ಯಾಯವಾಗಿದೆ ಅಂತ ಹೇಳಬೇಕು. ಸಿದ್ದರಾಮಯ್ಯ ಯಡಿಯೂರಪ್ಪ ಅವರಿಗೆ ಋಣಿಯಾಗಿರಬೇಕು. ಅವರ ಭಾವಚಿತ್ರ ಇಟ್ಟುಕೊಳ್ಳಬೇಕು. ಅವರು ಕೆಜೆಪಿ ಸ್ಥಾಪಿಸದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್ ಗೆ ಯಾವುದೇ ರಾಜಕೀಯ ಲಾಭವಾಗುವುದಿಲ್ಲ. ವೈಯಕ್ತಿಕ ಟೀಕೆಯಿಂದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ವೃದ್ದಿಯಾಗಿದೆ.
ನಮ್ಮ ಪ್ರಧಾನಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಟ್ಡದಲ್ಲಿ ಉನ್ನತ ಮಟ್ಟದ ನಾಯಕರಾಗಿದ್ದಾರೆ ಎಂದರು.

*ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ*
ಬೆಂಗಳೂರಿನಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಅಂತಾರಾಷ್ಟ್ರೀಯ ವಿಷಯವಾಗುತ್ತದೆ. ಚನೈ, ಮುಂಬೈನಲ್ಲಿ ಸ್ವಲ್ಪ ಮಳೆಯಾದರೂ ಮುಳುಗುತ್ತವೆ. ಆದರೆ, ಬೆಂಗಳೂರಿನಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಸಮಸ್ಯೆಯಾಗಿದೆ ಅದನ್ನು ಎರಡು ದಿನದಲ್ಲಿ ‌ಸಮಸ್ಯೆ ಪರಿಹರಿಸಿದ್ದೇವೆ ಎಂದರಲ್ಲದೇ ಮುಂದಿನ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿ ಪರ್ವವನ್ನು ಮುಂದುವರೆಸುತ್ತೇವೆ. ರಾಜ್ಯದ ಜನರು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.


[ays_poll id=3]