ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಶುಕ್ರವಾರ ಸಂಜೆ ರಸ್ತೆ ಮೇಲೆ ಹೋಗುತ್ತಿದ್ದ, ಪಾದ ಚಾರಿ ವಿದ್ಯಾರ್ಥಿಗಳ ಮೇಲೆ ಥಾರ್ ಗಾಡಿಯೊಂದು ರಿವರ್ಸ್ ಬರುವ ವೇಳೆ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿ ಓರುವ ವಿದ್ಯಾರ್ಥಿನಿ ಮೃತಪಟ್ಟು, ನಾಲ್ವರು ಆಸ್ಪತ್ರೆ ಪಾಲಾಗಿದ್ದರು. ಇನ್ನು ಈ ಒಂದು ಘಟನೆಗೆ ಸಂಬಂಧಪಟ್ಟಂತೆ ಇದೀಗ ಅಪಘಾತವಾದ ಸ್ಥಳದ ಸಿಸಿ ಟಿವಿ ಫುಟೇಜ್ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.