ರಾಜನಂತೆ ಕುಂತವನಿಗೆ, ಗೂಳಿಯಂತೆ ಗುದ್ದಿದ ಲಾರಿ : ಬೆಕಿತ್ತಾ‌ ಇದು ಎಂದ ನೆಟ್ಟಿಗರು..

K 2 Kannada News
ರಾಜನಂತೆ ಕುಂತವನಿಗೆ, ಗೂಳಿಯಂತೆ ಗುದ್ದಿದ ಲಾರಿ : ಬೆಕಿತ್ತಾ‌ ಇದು ಎಂದ ನೆಟ್ಟಿಗರು..
WhatsApp Group Join Now
Telegram Group Join Now

K2kannadanews.in

King lorry bull ಉತ್ತರ ಪ್ರದೇಶ : ಸುರಿಯುತ್ತಿರುವ ಮಳೆಯಲ್ಲಿ (Rain)  ನಡು ರಸ್ತೆಯಲ್ಲಿ (Road) ವಾಹನಗಳಿಗೆ ಅಡ್ಡಲಾಗಿ, ರಾಜನಂತೆ (king) ಕುಂತಿದ್ದ ವ್ಯಕ್ತಿ (Man) ಒಬ್ಬನಿಗೆ ಗೂಳಿಯಂತೆ (bull) ನುಗ್ಗಿ ಬಂದ ಲಾರಿ (Lorry) ಡಿಕ್ಕಿ ಹೊಡೆದ ವಿಡಿಯೋ (Social media) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.

ಹೌದು X ನಲ್ಲಿ Ranvijay sighn ಮತ್ತು Saurabh ಖಾತೆಯಲ್ಲಿ ಈ ವೀಡಿಯೋ ಅಪ್ ಲೋಡ್ ಆಗಿದ್ದು, ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಈ ಘಟನೆ ನಡೆದಿದೆ ಎಂದು ಉಲ್ಲೇಕಿಸಲಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಹನ ದಟ್ಟಣೆ ಇರುವ ರಸ್ತೆಯ ಮಧ್ಯದಲ್ಲಿ ಪ್ಲಾಸ್ಟಿಕ್‌ ಕುರ್ಚಿಯ ಮೇಲೆ ಅರೆ ಬೆತ್ತಲೆ ಆಗಿ ತನ್ನ ಕಾಲುಗಳನ್ನು ಮಡಚಿಕೊಂಡು ಕುತಿದ್ದಾನೆ. ಈತ ಈ ರೀತಿ ಕುಳಿತಿರುವುದರಿಂದ ಟ್ರಾಫಿಕ್‌ ತೊಂದರೆ ಆಗುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಆತ ಪೊಲೀಸ್ ಚೆಕ್ ಪೋಸ್ಟ್ ಬಳಿ ಕುಳಿತಿದ್ದರೂ, ಆತನನ್ನು ಯಾರೂ ಸ್ಥಳದಿಂದ ಏಳಿಸುವ ಪ್ರಯತ್ನ ಮಾಡುತ್ತಿಲ್ಲ.

ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಟ್ರಕ್‌ವೊಂದು, ಆತ ಕುತಿದ್ದ ಕುರ್ಚಿಗೆ ಡಿಕ್ಕಿ ಹೊಡೆದಿದೆ, ಕೂಡಲೆ ಆತ ನೆಲದ ಮೇಲೆ ಬಿಳುತ್ತಾನೆ. ಅದಾದ ಬಳಿಕ ಆತ ಸುತ್ತಲೂ ನೋಡುತ್ತಿರುವುದು ಕಂಡುಬಂದಿದೆ. ಆದರೆ ಈ ವೇಳೆ ಆತನಿಗೆ ಯಾವುದೇ ಗಾಯವಾಗದೇ ಇರುವುದು ವಿಡಿಯೋದಲ್ಲಿದೆ. ಘಟನೆಗೆ ಸಂಬಂಧಿಸಿ ಕೋತ್ವಾಲಿ ನಗರ ಪೊಲೀಸ್ ಠಾಣೆ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದ್ದು, ವಿಡಿಯೋದಲ್ಲಿರುವ ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಆತನ ಕುಟುಂಬಕ್ಕೆ ಒಪ್ಪಿಸಲಾಗಿದೆ, ಯುವಕನಿಗೆ ಡಿಕ್ಕಿ ಹೊಡೆದ ಟ್ರಕ್ ಅನ್ನು ಗುರುತಿಸಲಾಗುತ್ತಿದೆ, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು X ನಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article