This is the title of the web page
This is the title of the web page
Local News

ನವಲಕಲ್ ಗ್ರಾ.ಪ ಬ್ರಹ್ಮಾಂಡ ಭ್ರಷ್ಟಾಚಾರ : ಕ್ರಮಕ್ಕೆ ಆಗ್ರಹ


ರಾಯಚೂರು : ನವಲಕಲ್ ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸಿರವಾರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಕೂಡ ಪಾಲುದಾರರಾಗಿದ್ದಾರೆ ಎಂಬ ಅನುಮಾನ ಶಂಕೆ ವ್ಯಕ್ತವಾಗುತ್ತಿದೆ ಎಂದು ಎಸ್.ಎಫ್.ಐ ಸಿರವಾರ ತಾಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ ಆರೋಪಿಸಿದರು.

ರಾಯಚೂರು ಜಿಲೆಯ ಸಿರವಾರ ತಾಲೂಕಿನ ನವಲಕಲ್‌ ಗ್ರಾಮ ಪಂಚಾಯತಿಯಲ್ಲಿ 2020-21, 22-23 ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯ ಅಡಿಯಲ್ಲಿ, ಬಂದಿರುವ ಅನುದಾನವನ್ನು ಸುಳ್ಳು ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆದ ಸರ್ಕಾರದ ಹಣವನ್ನು, ಸರಕಾರಕ್ಕೆ ಮರು ಪಾವತಿಸಬೇಕು ಮತ್ತು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಅವರನ್ನು ಅಧಿಕಾರದಿಂದ ಪದಚ್ಯೂತಿ ಗೊಳಿಸಬೇಕು ಹಾಗೂ ಭ್ರಷ್ಟಾಚಾರ ವಿರುದ್ದ ತನಿಖೆ ನಡೆಸಲು ಮನವಿಯನ್ನು ಸಲ್ಲಿಸಲಾಗಿತ್ತು.

ಭ್ರಷ್ಟಾಚಾರದಲ್ಲಿ, ಪಾಲುದಾರರಾಗಿರುವ ಸಿರವಾರ ತಾಲೂಕು ಪಂಚಾಯತ್ ಇಓ ಅವರು ವಿನಾಕಾರಣ ಕಾಲ ಹರಣ ಮಾಡಿ, ನಂತರ ತನಿಖೆ ಕೈಗೊಂಡು ನವಲಕಲ್ ಗ್ರಾಪಂ ಅಭಿವೃದ್ಧಿ, ಅಧಿಕಾರಿಗಳು ಯಾವುದೇ ದಾಖಲೆಗಳು ಒದಗಿಸಿಲ್ಲ ಎಂದು ವರದಿಯನ್ನು ನೀಡಿದ್ದಾರೆ. ಅದಾದ ನಂತರ ಸಿಇಒ ಅವರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಯಾವುದೇ ಕ್ರಮ ಕೈಗೊಂಡಿಲ್ಲ, ಕೂಡಲೇ ಭ್ರಷ್ಟಾಚಾರ ಎಸಗಿದವರ ವಿರುದ್ದ ಕಾನೂನು ಕ್ರಮ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮುಂದೆ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.


[ays_poll id=3]