This is the title of the web page
This is the title of the web page
National News

ರಾಷ್ಟ್ರೀಯ ಹೂಸು ದಿನ : 8 ಪ್ರಯೋಜನಗಳು ಗೊತ್ತಾ..


K2 ನ್ಯೂಸ್ ಡೆಸ್ಕ್‌ : ಪ್ರತಿದಿನ ಏನಾದರೂ ರಾಷ್ಟ್ರೀಯ ದಿನ, ಅಂತಾರಾಷ್ಟ್ರೀಯ ದಿನ ಇದ್ದೇ ಇರುತ್ತದೆ. ಆದರೆ, ಮೂಗು ಮುಚ್ಚಿಕೊಳ್ಳುವಂತೆ ಮಾಡುವ ಹೂಸಿಗೂ ಒಂದು ದಿನವಿದೆ ಎಂದು ಗೊತ್ತೆ? ಜನವರಿ 7 ರಾಷ್ಟ್ರೀಯ ಹೂಸು ದಿನ, ಹೂಸು ಬಿಡುವುದರಿಂದ ದೊರಕುವ 8 ಪ್ರಯೋಜನಗಳು, ಮೂಗು ಮುಚ್ಚದೆ ಓದಿ. ಹೂಸಿನ ಇತಿಹಾಸ ಹುಡುಕಲು ಹೋಗುವುದು ಕಷ್ಟ.

ಕಾರಣ, ಈ ಭೂಮಿಯಲ್ಲಿ ಮನುಷ್ಯರು ಮತ್ತು ಪ್ರಾಣಿಗಳ ಹುಟ್ಟಿಕೊಂಡ ಸಮಯದಲ್ಲಿಯೇ ಹೂಸು ಕೂಡ ಉದಯವಾಗಿರಬಹುದು. ಕ್ರಿಸ್ತಪೂರ್ವ 569ರಲ್ಲಿ ಈಜಿಪ್ಟ್‌ನ ರಾಜ ಅಪ್ರೈಸ್‌ನ ವಿರುದ್ಧ ಊಸಿನ ಯುದ್ಧ ಮಾಡಿ ಆತನನ್ನು ಸಾಯಿಸಲಾಯಿತಂತೆ. ಇದರ ಸತ್ಯಾಸತ್ಯತೆ ನಮಗಂತೂ ಗೊತ್ತಿಲ್ಲ. ಕ್ರಿ.ಪೂ. 1900ರಲ್ಲಿ ಪ್ರಾಚೀನ ಮೆಸಾಪೊಟಮಿಯಾದಲ್ಲಿ ಊಸಿನ ವಿಷಯದಲ್ಲಿ ಹಾಸ್ಯಗಳನ್ನು ಹೇಳಲಾಗುತ್ತಿತ್ತಂತೆ. 2008ರಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ರಾಷ್ಟ್ರೀಯ ಹೂಸು ದಿನ ಆರಂಭಿಸಲಾಯಿತಂತೆ. ಕೆಲವೊಂದು ದೇಶಗಳು ಈ ದಿನವನ್ನು ರಾಷ್ಟ್ರೀಯ ದಿನವಾಗಿ ಆಚರಿಸುತ್ತಿವೆ. ಇದರ ಇತಿಹಾಸವನ್ನು ಹೆಚ್ಚು ಕೆದಕುವುದು ಬೇಡ. ಹೂಸಿನ ಕುರಿತಾದ ಸೋಜಿಗದ ಸಂಗತಿಗಳನ್ನು ತಿಳಿದುಕೊಳ್ಳುವುದಾದರೆ.

* ಪ್ರತಿಯೊಬ್ಬ ವ್ಯಕ್ತಿಯು 500ರಿಂದ 1500 ಮಿಲಿಲೀಟರ್‌ನಷ್ಟು ಗ್ಯಾಸ್‌ ಉತ್ಪಾದಿಸುತ್ತಾರಂತೆ. ಅದು 10ರಿಂದ 20 ಹೂಸು ಆಗಿ ಬಿಡುಗಡೆಯಾಗುತ್ತಂತೆ.
* ವ್ಯಕ್ತಿಯೊಬ್ಬ ಹೊರಬಿಡುವ ಶೇಕಡ 99 ಹೂಸು ವಾಸನೆ ರಹಿತವಾಗಿರುತ್ತದೆ ಎನ್ನಲಾಗಿದೆ. ಬಹುತೇಕ ಹೂಸು ಹೈಡ್ರೊಜನ್‌, ಕಾರ್ಬನ್‌ ಡೈಆಕ್ಸೈಡ್‌, ಮಿಥೇನ್‌ ಹೊಂದಿರುತ್ತದೆ. ಎಲ್ಲಾದರೂ ಅದಕ್ಕೆ ಹೈಡ್ರೊಜನ್‌ ಸಲ್ಫೈಡ್‌ ಸೇರಿದಾಗ ಮಾತ್ರ ವಾಸನೆ ಬರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
* ಗಮ್‌ ಮತ್ತು ಸೋಡಾ ಸೇವನೆಯಿಂದ ಹೆಚ್ಚು ಹೂಸು ಬರುತ್ತದೆಯಂತೆ. ಎಲ್ಲಾ ಹೂಸುಗಳು ಬ್ಯಾಕ್ಟೀರಿಯಾದಿಂದಲೇ ಸೃಷ್ಟಿಯಾಗುವುದಲ್ಲ. ಹೊಟ್ಟೆಯೊಳಗೆ ಸೇರಿಕೊಂಡ ಅನಗತ್ಯ ಗಾಳಿಯೂ ಊಸು ಸೃಷ್ಟಿಸುತ್ತದೆ.
*ಬೂಮರ್‌ ಅಥವಾ ಗಮ್‌ ಜಗಿಯುವುದರಿಂದಲೂ ಊಸು ಹೆಚ್ಚಾಗುತ್ತದೆ. ಇದೇ ರೀತಿ ಸೋಡಾ ಸೇವನೆಯೂ ಹೆಚ್ಚಿನ ಗ್ಯಾಸ್‌ ಉತ್ಪದಿಸುತ್ತದೆ.
*ಹೂಸು ಬಿಡುವುದು ನಿಮಗೆ ಆರೋಗ್ಯಕಾರಿ ಹೊರತು ಸುತ್ತ ಮುತ್ತಲಿನವರಿಗಲ್ಲ. ಕರುಳಿನ ಆರೋಗ್ಯದ ಸೂಚನೆಯೂ ಹೌದಂತೆ.
*ಆಧುನಿಕ ಜಗತ್ತು ಹೂಸು ಬಿಡುವವರನ್ನು ಕೆಕ್ಕರಿಸಿ ನೋಡಿದರೂ ಊಸು ಬಿಡುವುದು ಆರೋಗ್ಯಕಾರಿ ಎನ್ನಲಾಗಿದೆ.
*ನಿಮ್ಮ ಹೂಸು ನಿಮಗೆ ವಾಸನೆ ಬರುವುದು ಕಡಿಮೆ. ಕೆಲವೊಮ್ಮೆ ಯಾರಾದರೂ ಹೂಸು ಬಿಟ್ಟಿರಾ ಎಂದು ಎಲ್ಲರೂ ಮೂಗು ಮುಚ್ಚಿಕೊಂಡಾಗ ಹೂಸು ಬಿಟ್ಟ ನೀವೂ ಕೂಡ ಮೂಗು ಮುಚ್ಚಿ ನಾನವನಲ್ಲ ಎಂದು ತೋರಿಸಲು ಪ್ರಯತ್ನಿಸಬಹುದು. ಆದರೆ, ಬಹುತೇಕ ಸಂದರ್ಭದಲ್ಲಿ ನಿಮ್ಮ ಹೂಸು ನಿಮಗೆ ಸ್ಮೆಲ್‌ ಬರೋದಿಲ್ಲ ಅಂತೆ. ನಿಮ್ಮ ದೇಹದೊಳಗಿನ ವಾಸನೆಗೆ ನಿಮ್ಮ ದೇಹ ಒಗ್ಗಿಕೊಂಡಿರುವುದು ಇದಕ್ಕೆ ಕಾರಣ ಇರಬಹುದು ಎಂದು ಹೇಳಲಾಗಿದೆ.
* ಹೂಸಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಎನ್ನುವ ಸಂಗತಿ ನಿಮಗೆ ಗೊತ್ತೆ? ದಯವಿಟ್ಟು ಇದನ್ನು ಪ್ರಯೋಗ ಮಾಡಲು ಹೋಗಬೇಡಿ. ಬೇಕಿದ್ದರೆ ಯೂಟ್ಯೂಬ್‌ನಲ್ಲಿ lighting fart on fire ಎಂದು ಹುಡುಕಿ, ಸಾಕಷ್ಟು ವಿಡಿಯೋಗಳು ದೊರಕುತ್ತವೆ.
*ಹೂಸು ನಿಯಂತ್ರಿಸಲಾಗದು. ಬೇಕಿದ್ದರೆ ಹೂಸಿನ ಶಬ್ದ ಕಡಿಮೆ ಮಾಡಬಹುದು. ಆದರೆ, ಅದಕ್ಕೆ ಹೊರಕ್ಕೆ ಹೋಗಬೇಕಿನಿಸಿದಾಗ ನಿಮಗೆ ನಿಯಂತ್ರಿಸಲಾಗದು. ಅದು, ಹೇಗಾದರೂ ಹೊರಕ್ಕೆ ಹೋಗಿಯೇ ಹೋಗುತ್ತದೆ.
* ಹೂಸಿಗೆ ಕಾರಣವಾಗುವ ಬ್ಯಾಕ್ಟಿರಿಯಾವನ್ನು ನಮ್ಮ ದೇಹದಿಂದ ತೆಗೆದರೆ ಊಸು ಕಡಿಮೆ ಮಾಡಬಹುದು ಎಂದು ಯೋಚಿಸಬೇಡಿ. ಗ್ಯಾಸ್‌ ಉತ್ಪಾದಿಸುವ ಆಹಾರ ಸೇವನೆ ಕಡಿಮೆ ಮಾಡುವ ಮೂಲಕ ಹೂಸು ಕಡಿಮೆ ಮಾಡುವುದು ಉತ್ತಮ ಐಡಿಯಾವಲ್ಲ. ಬ್ಯಾಕ್ಟಿರಿಯಾ ಮತ್ತು ಡಯೆಟ್‌ ಸಮತೋಲನದಲ್ಲಿರಬೇಕು ಎನ್ನುತ್ತಾರೆ ತಜ್ಞರು.


[ays_poll id=3]