ನಳಿನ್ ಒಬ್ಬ ವಿದೂಷಕ ಉತ್ತರ ಕೊಡದೆ ಇರುವುದೇ ಒಳ್ಳೆಯದು
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ರಾಜಕೀಯದ ನಾಲೆಡ್ಜ್ ಇಲ್ಲ, ಏನೇನೋ ಮಾತಾಡ್ತಾನೆ ಅಷ್ಟೆ ಎಂದು ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಬಿಜೆಪಿ ಸೇರ್ತಾರೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಟೀಲ್ ಬಾಯಿಗೆ ಬಂದ ಹಾಗೆ ಮಾತಾಡುತ್ತಾನೆ. ಅದಕ್ಕಾಗಿ ಉತ್ತರ ಕೊಡದೆ ಇರೋದು ಒಳ್ಳೆಯದು ಎಂದಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ಬಫೂನ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸಿದ್ದು, ಖರ್ಗೆ, ಡಿಕೆಶಿ ಮನೆಯವರು ಬಿಜೆಪಿ ಸೇರುತ್ತಾರೆ ಎಂಬ ನಳಿನ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ನಳಿನ್ ವಿದೂಷಕ ಇದ್ದಂತೆ. ಅವನಿಗೆ ರಾಜಕೀಯ ಪ್ರಜ್ಞೆ ಇಲ್ಲ. ಪ್ರಜ್ಞೆ ಇಲ್ಲದೆ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾನೆ ಅಷ್ಟೆ. ಹಾಗಾಗಿ ಇಂತಹವರಿಗೆಲ್ಲ ಉತ್ತರ ಕೊಡದೆ ಇರುವುದೇ ಒಳ್ಳೆಯದು ಎಂದಿದ್ದಾರೆ.
![]() |
![]() |
![]() |
![]() |
![]() |