K2kannadanews.in
SSLC ವೈರಲ್ ಸುದ್ದಿ : ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದು ಇದೀಗ ಉತ್ತರ ಪತ್ರಿಕೆಗಳು ಕರೆಕ್ಷನ್ ಮಾಡಲಾಗುತ್ತಿದೆ. ಇಲ್ಲಿ ಕೆಲ ವಿದ್ಯಾರ್ಥಿಗಳು ಪಾಸಾಗಲು ಏನೆಲ್ಲಾ ಕಸರತ್ತುಗಳನ್ನು ಮಾಡಿದ್ದಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಲವ್ ಉಳಿಸಿಕೊಳ್ಳಲು ಉತ್ತರ ಪತ್ರಿಕೆಯಲ್ಲಿ ನನ್ ಲವ್ ನಿಮ್ಮ ಕೈಯಾಗ ಐತ್ರಿ ಪಾಸ್ ಮಾಡಿ ಅಂತ ಬೇಡಿಕೊಂಡು, ಚಾ ಕುಡಿಯಲು 500 ರೂಪಾಯಿ ಇಟ್ಟ ಘಟನೆ ಬೆಳಕಿಗೆ ಬಂದಿದೆ.
ಈ ಒಂದು ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಎನ್ನಲಾಗುತ್ತಿದ್ದು, ಅವಂದು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದು ಇಷ್ಟೇ, ಸರ್ ರೀ, ಮೇಡಂ ರೀ, ನಿಮ್ಮ ಕಾಲ ಬೀಳತ್ತೀನೆ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರ ಅಷ್ಟೇ ಲವ್ ಮಾಡತ್ತನೆ ಅಂದಾಳ ರೀ ನನ್ನ ಹುಡುಗಿ. ಈ 500 ನಿವ್ ಚಾ ಕುಡಿರಿ ಸರ್ ರೀ. ನನ್ನ ಪಾಸ್ ಮಾಡರಿ ಅಂತ ಕೋರಿಕೊಂಡಿದ್ದಾನೆ.
ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರ ಬರೆಯೋದು ಬಿಟ್ಟು, ತನ್ನ ಲವ್ ಮ್ಯಾಟರ್ ಹೇಳಿಕೊಂಡಿದ್ದಾನೆ. ಜೊತೆಗೆ ಪಾಸ್ ಮಾಡಿ ಪ್ಲೀಸ್ ಅಂತ ಮೌಲ್ಯ ಮಾಪಕರನ್ನು ಬೇಡಿಕೊಂಡಿರುವಂತ ವಿಚಿತ್ರ ಪತ್ರ ಚಿಕ್ಕೋಡಿ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ.