
ರಾಯಚೂರು: ನಾಡಿನಾದ್ಯಂತ ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಮರು ಶನಿವಾರ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಡುವೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ನೂರಾರು ಮುಸ್ಲಿಮರು ಭೇಟಿ ನೀಡಿ ರಾಯರ ದರ್ಶನ ಪಡೆದರು.
ರಂಜಾನ್ ಪ್ರಾರ್ಥನೆ ಬಳಿಕ ನೂರಾರು ಮುಸ್ಲಿಮರು ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು. ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ ಪರಿಮಳ ಪ್ರಸಾದ್ ವಿತರಿಸಿದರು. ಮಠಕ್ಕೆ ಸಾಕಷ್ಟು ಮುಸ್ಲಿಂ ಭಕ್ತರು ಇದ್ದಾರೆ. ಪ್ರತಿ ವರ್ಷ ಮಂತ್ರಾಲಯಕ್ಕೆ ಭೇಟಿ ನೀಡಿ ನೂರಾರು ಮುಸ್ಲಿಮರು ರಾಯರ ದರ್ಶನ ಪಡೆಯುವ ಮೂಲಕ ರಂಜಾನ್ ಆಚರಿಸುತ್ತಾರೆ.
![]() |
![]() |
![]() |
![]() |
![]() |
[ays_poll id=3]