K2kannadanews.in
Viral video ಮುಂಬೈ : ಗೇಟ್‌ವೇ ಆಫ್ ಇಂಡಿಯಾ (Iconic Gateway of India) ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದಿದ್ದು (Boat Capsized) 13 ಜನ ಮೃತಪಟ್ಟಿದ್ದು, 101 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ನೌಕಾಪಡೆಯ ಬೋಟ್ ಎಂಜಿನ್‌ನ ಕಾರ್ಯಕ್ಷಮತೆ ಪರೀಕ್ಷಿಸುವ ಪ್ರಯೋಗ ನಡೆಸುವಾಗ ತಾಂತ್ರಿಕ ದೋಷದಿಂದಾಗಿ ಸ್ಪೀಡ್ ಬೋಟ್ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರನ್ನು ಹೊತ್ತೊಯ್ಯತ್ತಿದ್ದ, ನೀಲ್ ಕಮಲ್ ಬೋಟ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಒಟ್ಟು 110 ಜನರನ್ನು ಬೋಟ್ ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಜ ಅ ವಲಯಸಮುದ್ರದಲ್ಲಿ ಮುಳುಗಿ 13 ಜನ ಸಾವನ್ನಪ್ಪಿದ್ದಾರೆ. 101 ಜನರನ್ನು ರಕ್ಷಣೆ ಮಾಡಲಾಗಿದೆ.
ಸದ್ಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 13 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತ ದೋಣಿಯು ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದಿಂದ ಯುನೆಸ್ಕೋ ಪರಂಪರೆಯ ಎಲಿಫೆಂಟಾ ದ್ವೀಪಕ್ಕೆ (Elephanta Island) ತೆರಳುತ್ತಿದ್ದಾಗ ಸಂಜೆ 5.15ರ ಸುಮಾರಿಗೆ ಈ ಘಟನೆ ನಡೆದಿದೆ.